Showing posts with label ಸೆರಗ ಬಿಡಯ್ಯ ಕೃಷ್ಣ ಕರೆಯಲು ಪೋಪೆನು purandara vittala SERAGA BIDAYYA KRISHNA KAREYALU POPENU. Show all posts
Showing posts with label ಸೆರಗ ಬಿಡಯ್ಯ ಕೃಷ್ಣ ಕರೆಯಲು ಪೋಪೆನು purandara vittala SERAGA BIDAYYA KRISHNA KAREYALU POPENU. Show all posts

Sunday, 5 December 2021

ಸೆರಗ ಬಿಡಯ್ಯ ಕೃಷ್ಣ ಕರೆಯಲು ಪೋಪೆನು purandara vittala SERAGA BIDAYYA KRISHNA KAREYALU POPENU

ಸೆರಗ ಬಿಡಯ್ಯ ಕೃಷ್ಣ ಕರೆಯಲು ಪೋಪೆನು |
ಕರುಗಳು ಹಸಿದಿವೆ ಕರುಣಿಗಳರಸನೆ ಪ

ಕೆನೆಮೊಸರನೆ ಕಡೆದು ನಿನಗೀವೆ ಬೆಣ್ಣೆಯ |ಗೊನೆಯ ಬಾಳೆಯ ಹಣ್ಣ ತಿನಲು ಕೊಡುವೆ ||ನೆನೆಗಡಲೆ ಕೊಬ್ಬರಿ ನಿನಗೆ ಮೆಲಲಿಕ್ಕುವೆ |ತನಯರೊಡನೆ ಆಡಕಳುಹುವೆ ರಂಗಯ್ಯ 1

ಗೋವಳರೆಲ್ಲ ಬಂದು ಬಾಗಿಲೊಳಗೆನಿಂದು|ಗೋವುಗಳನು ಬಿಡಲು ಸಾರುತಿಹರು ||ನೋವುಗೊಳಿಸಬೇಡ ಪರರ ಮಕ್ಕಳ ನೀನು |ಭಾವಜನಯ್ಯನೆ ಲಾಲಿಸೀ ನುಡಿಯನು 2

ಶರಧಿಯ ತಡಿಯಲಿ ನೆರೆದಿಪ್ಪ ಸತಿಯರ |ಪರಿಪರಿ ವಸ್ತ್ರವ ಸೆಳೆಯಬೇಡ ||ನೆರೆಮನೆ ಹೊರೆಮನೆ ಕರುಗಳ ಬಿಡಬೇಡ |ಸುರರಿಗೊಡೆಯ ನಮ್ಮ ಪುರಂದರವಿಠಲ 3
****