..
kruti by ವೀರನಾರಾಯಣ Veeranarayana
ರಾಯ ಕೇಶವ ಚರಣಕೆರಗುವೆನು ಕಾಯೊ ಮಾಧವ ಪ
ಮಾಯಾ ಪ್ರಪಂಚದಿ ಬಾಯಾರಿ ಬಳಲುತಿಹೆತೋಯಜಾಕ್ಷನೆ ನೀ ಕಾಯೊ ಮಾಧವ ಅ.ಪ.
ಪಾರುಗಾಣೆನಯ್ಯ ಸಂಸಾರ ಬಂಧನದಿಂದ ನಾನುಸಾರಾಸಾರಾ ವಿಚಾರವಿಲ್ಲವೊ ಗಡ ತೀರ ಅಲ್ಪನು ತಿಳಿ 1
ಜ್ಞಾನಹೀನನಾಗಿ ನಿನ್ನ ಧ್ಯಾನಮಾಡದಾದೆ ನಾನುಮಾನಾಪಮಾನಕ್ಕೆ ನೀ ಹೊಣೆಗಾರನು ದೀನಜನಪಾಲಕನೆ 2
ಆರು ಹಗೆಗಳೆನ್ನ ಮೈಯ್ಯ ಸೇರಿ ನಿನ್ನ ಭಜಿಸಗೊಡರುಬಾರೊ ನೀ ದಯವನು ತೋರೊ ಗದುಗಿನ ವೀರನಾರಾಯಣನೆ 3
***