Showing posts with label ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರಾ shyamasundara SATATA PAALISO ENNA YATI RAGHAVENDRA. Show all posts
Showing posts with label ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರಾ shyamasundara SATATA PAALISO ENNA YATI RAGHAVENDRA. Show all posts

Sunday 5 December 2021

ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರಾ ankita shyamasundara SATATA PAALISO ENNA YATI RAGHAVENDRA



ಈ ಕೃತಿಯಲ್ಲಿ ಶ್ರೀ ರಾಯರು ಶ್ರೀ ಪ್ರಹ್ಲಾದಾವತಾರಿಗಳೆಂದು ಸ್ಪಷ್ಟ ಪಡಿಸಿದ್ದಾರೆ. 


ಸತತ ಪಾಲಿಸೋ ಯೆನ್ನ ।
ಯತಿ ರಾಘವೇಂದ್ರ ।
ಪತಿತ ಪಾವನ ಪಾವನ ।
ಸುತ ಮತಾಂಬುಧಿ ಚಂದ್ರ ।। ಪಲ್ಲವಿ ।।

ನಂಬಿದೆನೋ ನಿನ್ನ ಚರ-
ಣಾಂಬುಜವ ಮನ್ಮನದ ।
ಹಂಬಲವ ಪೂರೈಸೋ 
ಬೆಂಬಿಡದಲೆ ।
ಕುಂಭಿಣೀಸುರ ನಿಕು-
ರುಂಬ ವಂದಿತ ಜಿತ ।
ಶಂಬರಾಂತಕ ಶಾತ-
ಕುಂಭ ಕಶ್ಯಪ ತನಯ ।। ಚರಣ ।।

ಕ್ಷೋಣಿಯೊಳು ನೀ ಕುಂಭ-
ಕೋಣ ಕ್ಷೇತ್ರದಿ ಜನಿಸಿ ।
ವೀಣಾ ವೇಂ-
ಕಟ ಅಭಿದಾನದಿಂದ ।
ಸಾನುರಾಗದಿ ದ್ವಿಜನ 
ಪ್ರಾಣ ಉಳುಹಿದ ಮಹಿಮ ।
ಯೇನೆಂದು ಬಣ್ಣಿಸಲಿ
ಜ್ಞಾನಿಕುಲ ತಿಲಕ ।। ಚರಣ ।।
ಮಂದಮತಿಗಳ ಸಂಗ-
ದಿಂದ ನಿನ್ನಯ ಚರಣ ।
ಇಂದಿನ ತನಕ ನಾ 
ಪೊಂದಲಿಲ್ಲ ।
ಕುಂದು ಯೆಣಿಸದೆ ಕಾಯೋ 
ಕಂದರ್ಪ ಪಿತ ಶ್ಯಾಮ ।
ಸುಂದರನ ದಾಸ ಕ-
ರ್ಮಂದಿ ಕುಲವರಿಯ ।। ಚರಣ ।।
***

ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

ಕುಂಭಿಣೀಸುರ = ಭೂಸುರ
ನಿಕುರುಂಬ = ಸಮೂಹ
ಶಾತಕುಂಭ = ಬಂಗಾರ
ಶಾತಕುಂಭಕಶ್ಯಪ = ಹಿರಣ್ಯಕಶಿಪು 
ಶಾತಕುಂಭಕಶ್ಯಪ ತನಯ = ಹಿರಣ್ಯಕಶಿಪುವಿನ ಮಗ ಪ್ರಹ್ಲಾದ
( ಕುಂಭಿಣೀಸುರ = ಭೂಸುರ; ನಿಕುರುಂಬ = ಸಮೂಹ; ಶಾತಕುಂಭ = ಬಂಗಾರ; ಶಾತಕುಂಭಕಶ್ಯಪ = ಹಿರಣ್ಯಕಶಿಪು; ಶಾತಕುಂಭಕಶ್ಯಪ ತನಯ = ಹಿರಣ್ಯಕಶಿಪುವಿನ ಮಗ ಪ್ರಹ್ಲಾದ )
ನಮ್ಮ ನಿಮ್ಮೆಲ್ಲರಿಗೂ ರಾಯರೇ ಗತಿಯು ನಮಗೆ ಶ್ರೀ ರಾಘವೇಂದ್ರ ಗುರುರಾಯರೇ ಗತಿಯು!!!!!
ನಮ್ಮ ಪ್ರೀತಿಯ ಗುರುಗಳಾದ ಶ್ರೀ ಶ್ಯಾಮಸುಂದರ ದಾಸರ ಕೃತಿ ಸ್ಮರಣೆ ಮಾಡಿ
***

ಸತತ ಪಾಲಿಸೊ ಎನ್ನ ಯತಿ ರಾಘವೇಂದ್ರಾ |
ಪತಿತ ಪಾವನ ಪವನ ಸುತ ಮತಾಂಬುಧಿ ಚಂದ್ರಾ | ಪ. |

ಕ್ಷೋಣೀಯೊಳು ನಿ ಕುಂಭಕೋಣ ಕ್ಷೇತ್ರದಿ ಜನಿಸಿ
ವೀಣಾವೆಂಕಟ ಅಭಿದಾನಾದಿಂದಾ
ಸಾನುರಾಗದಿ ದ್ವಿಜನ ಪ್ರಾಣ ಉಳಿಸಿದ ಮಹಿಮೆ
ಏನೆಂದು ಬಣ್ಣಿಸಲಿ ಜ್ಞಾನಿ ಕುಲತಿಲಕಾ | ೧ |

ನಂಬಿದೆನೋ ನಿನ್ನ ಚರಣಾ೦ಬುಜವ ಮನ್ಮನದ
ಹಂಬಲ ಪೂರೈಸೋ ಬೆಂಬಿಡದಲೆ
ಕುಂಭಿಣಿ ಸುರ ನಿಕುರುಂಬ ವಂದಿತ ಜಿತ
ಶಂಭರಾಂತಕ ಶಾತ ಕುಂಭ ಕಶ್ಯಪ ತನಯಾ | ೨ |

ಮಂದಮತಿಗಳ ಸಂಗದಿಂದ ನಿನ್ನಯ ಚರಣ
ಇಂದಿನ ತನಕ ನಾ ಪೊಂದಲಿಲ್ಲಾ
ಕುಂದು ಎಣಿಸದೇ ಕಾಯೋ ಕಂದರ್ಪಪಿತ
ಶ್ಯಾಮ ಸುಂದರ ದಾಸ ಕರ್ಮಂದಿಗಳ ಕುಲವರ್ಯಾ | ೩ |
***

satata paliso enna yati raghavendra |
patita pavana pavana suta matambudhi chandra | pa |

kshoniyolu ne kumbakona kshetradi janisi
veena venkata abidanadinda
sanuragadi dvijana prana ulisida mahime
enendu bannisali jñāni kula tilaka | 1 |

nambideno ninna charanambujava manmanada
hambala puraiso bembidadale
kumbini sura nikurumba vandita jita
sambarantaka shata kumbha khasyapa tanaya | 2 |

mandamatigala sangadinda ninnaya charana
indina tanaka na pondalilla
kundu yenisade kayo kandarpapita
shyama sundara dasa karmandigala kulavarya | 3 |
***


ರಾಗ : ಕಾಂಬೋಧಿ  ತಾಳ : ಝಂಪೆ (raga tala may differ in audio)


ಸತತ ಪಾಲಿಸೊ ಎನ್ನ ಯತಿ  ರಾಘವೇಂದ್ರಾ |

ಪತಿತ ಪಾವನ ಪವನಸುತ ಮತಾಂಬುಧಿ ಚಂದ್ರಾ || ಅ.ಪ. ||


ಕ್ಷೋಣೀಯೊಳಗೆ ಕುಂಭಕೋಣ ಕ್ಷೇತ್ರದಿ ಮೆರೆದೆ |

ವೀಣಾವೆಂಕಟ ಅಭಿದಾನಾದಿಂದಾ |
ಸಾನುರಾಗದಿ ದ್ವಿಜನ ಪ್ರಾಣ ಉಳಿಸಿದ ಮಹಿಮೆ |
ಏನೆಂದು ಬಣ್ಣಿಸಲಿ ಜ್ಞಾನಿಗಳ ಕುಲತಿಲಕಾ | ೧ |

ನಂಬಿದೆನೋ ನಿನ್ನ ಪಾದಾಂಬುಜವ ಮನ್ಮನದಿ |

ಹಂಬಲ ಪೂರೈಸೋ ಬೆಂಬಿಡದಲೆ |
ಕುಂಭಿಣಿ ಸುರ ನಿಕುರುಂಬವಂದಿತ ಜಿತ |
ಶಂಭರಾಂತಕ ಶಾತ ಕುಂಭ ಕಶ್ಯಪ ತನಯಾ | ೨ |

ಮಂದಮತಿಗಳ ಸಂಗದಿಂದ ನಿನ್ನ ಪಾದ |

ಇಂದಿನತನಕ ನಾ ಪೊಂದಲಿಲ್ಲಾ |
ಕುಂದು ಎಣಿಸದೇ  ಕಾಯೋ ಕಂದರ್ಪ ಪಿತ |
ಶ್ಯಾಮ ಸುಂದರ ದಾಸ ಕರ್ಮಂದಿಗಳ ಕುಲವರ್ಯಾ | ೩ |
******

ಸತತ ಪಾಲಿಸೋ ಎನ್ನ | ಯತಿ ರಾಘವೇಂದ್ರ |
ಪತಿತ ಪಾವನ ಪವನ | ಸುತಮತಾಂಬುಧಿ ಚಂದ್ರ ಪ

ನಂಬಿದೆನು ನಿನ್ನ ಚರಣಾಂಬುಜವ ಮನ್ಮನದ
ಹಂಬಲವ ಪೂರೈಸೊ ಬೆಂಬಿಡದಲೆ ||
ಕುಂಭಿಣೀಸುರ ನಿಕುರುಂಭ ವಂದಿತ ಜಿತ
ಶಂಬರಾಂತಕ ಶಾತಕುಂಭ ಕಶ್ಯಪ ತನಯ 1

ಕ್ಷೋಣಿಯೊಳು ನೀ ಕುಂಭಕೋಣ ಕ್ಷೇತ್ರದಿ ಜನಿಸಿ
ವೀಣ ವೆಂಕಟ ಅಭಿದಾನದಿಂದ
ಸಾನುರಾಗದಿ ದ್ವಿಜನ ಪ್ರಾಣ ಉಳುಹಿದ ಮಹಿಮೆ |
ಏನೆಂದು ಬಣ್ಣಿಸಲಿ e್ಞÁನಿ ಕುಲತಿಲಕ2

ಮಂದಮತಿಗಳ ಸಂಗದಿಂದ ನಿನ್ನಯ ಚರಣ
ಇಂದಿನ ತನಕ ನಾ ಪೊಂದಲಿಲ್ಲ
ಕುಂದು ಎಣಿಸದೆ ಕಾಯೊ ಕಂದರ್ಪಪಿತ ಶಾಮ

ಸುಂದರನ ದಾಸಕರ್ಮಂದಿ ಕುಲವರ್ಯ 3
**********