Showing posts with label ಗುರುಪದವ ನಂಬಿ ಹರಿಪದವ ಕಾಂಬೆ prasannavenkata. Show all posts
Showing posts with label ಗುರುಪದವ ನಂಬಿ ಹರಿಪದವ ಕಾಂಬೆ prasannavenkata. Show all posts

Thursday, 26 December 2019

ಗುರುಪದವ ನಂಬಿ ಹರಿಪದವ ಕಾಂಬೆ guru parampara uttaradi mutt ankita prasannavenkata

ಗುರುಪದವ ನಂಬಿ ಹರಿಪದವ ಕಾಂಬೆ
ಮರುತ ಸಂತತಿಗೆ ನಮಿಸುವೆ ನಮಿಸುವೆ ||pa||

ಹರಿಪದಕೆ ಅಚ್ಛಿನ್ನ ಭಕುತಿ ಪರಿಪೂರ್ಣ ಶ್ರೀ
ಹರಿಕಾರ್ಯದಲಿ ಧುರಂಧರನೆನಿಸುವ
ಹರಿಭೃತ್ಯಜನಕೆ ಹಿತಕಾರಿ ಔದಾರಿ ಜಗ
ದ್ಗುರು ಪರಮಹಂಸ ಮಧ್ವತ್ರಿರೂಪಿಯ ||1||

ತತ್ವಸಾಗರ ತಿಮಿಂಗಿಲ ಪದ್ಮನಾಭಮುನಿ
ಕರ್ತ ಮೂಲರಾಮ ಮೆಚ್ಚಿದ ನರಹರಿಯ
ಮತ್ರ್ಯ ಮಾಯಿಜನ ತುಹಿನರವಿಭ
ಮಾಧವಾಭಿಜ್ಞ ಅಕ್ಷೋಭ್ಯತೀರ್ಥೆನಿಪ ಮಲ್ಲರ ||2||

ಸುಖತೀರ್ಥ ಗಂಭೀರ ವಾಕ್ಯವಾರಿಧಿಚಂದ್ರ
ಅಕಳಂಕ ಜಯವರ್ಯ ಯತಿಸಮೂಹ
ಮಕುಟಮಣಿ ವಿದ್ಯಾಧಿರಾಜ ನಿರ್ಮಲಕಾಯ
ಸುಕವೀಂದ್ರ ವಾಕ್ಸಿದ್ಧ ವಾಗೀಶರ ||3||

ಗುರುಭಕುತಿ ನಿಸ್ಸೀಮ ರಾಮಚಂದ್ರಾಖ್ಯಯತಿ
ಗುರು ಆಜ್ಞಾಪಾಲ ವಿದ್ಯಾನಿಧಿಗಳ
ದುರುವಾದಿಗಜಮೃಗಪ ರಘುನಾಥ ತೀರ್ಥ ಶ್ರುತಿ
ಪರಮಾರ್ಥ ಪರಿಚರ್ಯ ರಘುವರ್ಯರ ||4||

ವೈರಾಗ್ಯ ವೈಭವಾನ್ವಿತ ರಘೋತ್ತಮ ಮುನಿಪ
ವೈಷ್ಣವ ತತ್ವಜ್ಞ ವೇದವ್ಯಾಸರ
ಕೈವಲ್ಯಮಾರ್ಗಜ್ಞ ವಿದ್ಯಾಪತಿಯು ಹೊನ್ನ
ಮೈಯ ಮರುತಂಶ ವಿದ್ಯಾಧೀಶರ ||5||

ವೇದಾಮೃತಾಬ್ಧಿಯೊಳು ಮಗ್ನ ವೇದನಿಧಿಗಳ
ಸಾಧುನಿಕರಲಲಾಮ ಸತ್ಯವ್ರತರ
ಬಾದರಾಯಣ ರಾಮಪಾದರತ ಸತ್ಯನಿಧಿ
ಮೇದಿನಿಗೆ ಕಲ್ಪತರು ಸತ್ಯನಾಥರ ||6||

ಶ್ರೀ ಸತ್ಯನಾಥ ರತ್ನಾಕರ ಕರೋದ್ಭವ ಕುಮುದ
ಅಶೇಷಯಾಚಕ ಸುಖದ ಸುಗುಣ
ಶ್ರೀ ಸತ್ಯಾಭಿನವ ಮುನಿ ಭಾಗವತೇಢ್ಯಜ್ಞ
ಶಾಶ್ವತ ಪರೋಕ್ಷ ಗುರುಪದನಿಷ್ಠರ ||7||

ದುಷ್ಟ ಪರವಾದಿ ನರಕುಲಿಶ ಜಿತಕಾಮ ತಪೋ
ನಿಷ್ಠ ವಿದ್ಯೋನ್ನತ ವಿಚಾರಶೀಲ
ಶಿಷ್ಟ ಜನಪಾಲ ಶ್ರುತಿ ಜಲಾಭ್ಧಿ ಕಲ್ಲೋಲ
ಇಷ್ಟಾರ್ಥದಾತ ಸತ್ಯಾಧೀಶರ ||8||

ಕೃಷ್ಣ ಪಾದಾಸಕ್ತ ಗುರುಕೃಪಾಸಂಯುಕ್ತ
ಇಷ್ಟಾರ್ಥದಾತ ಸತ್ಯಾಧಿರಾಜರ
ಸೃಷ್ಠೇಶ ಪ್ರಸನ್ನವೆಂಕಟಪತಿಯ ಅನವರತ
ತುಷ್ಟೀಕರಿಸುವ ವಾಯುಮತ ಮಹಿಮರ ||9||
***

gurupadava naMbi haripadava kAMbe
maruta santatige namisuve namisuve ||pa||

haripadake acCinna Bakuti paripUrNa SrI
harikAryadali dhurandharanenisuva
hariBRutyajanake hitakAri audAri jaga
dguru paramahaMsa madhvatrirUpiya ||1||

tatvasAgara timingila padmanABamuni
karta mUlarAma meccida narahariya
matrya mAyijana tuhinaraviBa
mAdhavABij~ja akShOByatIrthenipa mallara ||2||

suKatIrtha gaMBIra vAkyavAridhichandra
akaLanka jayavarya yatisamUha
makuTamaNi vidyAdhirAja nirmalakAya
sukavIndra vAksiddha vAgISara ||3||

guruBakuti nissIma rAmachandrAKyayati
guru Aj~jApAla vidyAnidhigaLa
duruvAdigajamRugapa raGunAtha tIrtha Sruti
paramArtha paricarya raGuvaryara ||4||

vairAgya vaiBavAnvita raGhOttama munipa
vaiShNava tatvaj~ja vEdavyAsara
kaivalyamArgaj~ja vidyApatiyu honna
maiya marutaMSa vidyAdhISara ||5||

vEdAmRutAbdhiyoLu magna vEdanidhigaLa
sAdhunikaralalAma satyavratara
bAdarAyaNa rAmapAdarata satyanidhi
mEdinige kalpataru satyanAthara ||6||

SrI satyanAtha ratnAkara karOdBava kumuda
aSEShayAcaka suKada suguNa
SrI satyABinava muni BAgavatEDhyaj~ja
SASvata parOkSha gurupadaniShThara ||7||

duShTa paravAdi narakuliSa jitakAma tapO
niShTha vidyOnnata vicAraSIla
SiShTa janapAla Sruti jalABdhi kallOla
iShTArthadAta satyAdhISara ||8||

kRuShNa pAdAsakta gurukRupAsaMyukta
iShTArthadAta satyAdhirAjara
sRuShThESa prasannavenkaTapatiya anavarata
tuShTIkarisuva vAyumata mahimara ||9||
***