ಜಗನ್ನಾಥದಾಸರು
ಮಂಗಳಂ ನಿಜಭಕ್ತ ಪರಿಪಾಲಗೆ ಪ
ಕೇಸರಿ ತನಯಗೆ ಮಂಗಳ
ಕಂಜಾಪ್ತಜನ ಕಾಯ್ದಗೆ ಮಂಗಳ
ಅಂಜನಾದ್ರಿ ತಂದಾತಗೆ ಮಂಗಳ
ಸಂಜಯವಂತ ಶ್ರೀ ಹನುಮಂತಗೆ 1
ಕುಂತಿ ಪಾಂಡವಜನಾಗಿ ಕುವಲಯದೊಳು ಬಲ
ವಂತ ರಾಯರಾ ತರಿದಗೆ
ದಂತಿಪುರವ ಬೇಡಿ ಕೊಡದಿರೆ ಕೌರವರ
ಸಂತತಿ ಸವರಿದ ಸುಖ ಪೂರ್ಣಗೆ 2
ಮೂರವತಾರ ಮಾಡಿದಗೆ ಮಂಗಳ
ಮೂರೇಳು ಮತಗಳ ಮುರಿದವಗೆ ಮಂಗಳ
ಸಿಂಧು ಜಗನ್ನಾಥ ವಿಠಲನ
ಆರಾಧಿಸಿದ ಮಧ್ವ ಮುನಿರಾಯಗೆ 3
********
ಮಂಗಳಂ ನಿಜಭಕ್ತ ಪರಿಪಾಲಗೆ ಪ
ಕೇಸರಿ ತನಯಗೆ ಮಂಗಳ
ಕಂಜಾಪ್ತಜನ ಕಾಯ್ದಗೆ ಮಂಗಳ
ಅಂಜನಾದ್ರಿ ತಂದಾತಗೆ ಮಂಗಳ
ಸಂಜಯವಂತ ಶ್ರೀ ಹನುಮಂತಗೆ 1
ಕುಂತಿ ಪಾಂಡವಜನಾಗಿ ಕುವಲಯದೊಳು ಬಲ
ವಂತ ರಾಯರಾ ತರಿದಗೆ
ದಂತಿಪುರವ ಬೇಡಿ ಕೊಡದಿರೆ ಕೌರವರ
ಸಂತತಿ ಸವರಿದ ಸುಖ ಪೂರ್ಣಗೆ 2
ಮೂರವತಾರ ಮಾಡಿದಗೆ ಮಂಗಳ
ಮೂರೇಳು ಮತಗಳ ಮುರಿದವಗೆ ಮಂಗಳ
ಸಿಂಧು ಜಗನ್ನಾಥ ವಿಠಲನ
ಆರಾಧಿಸಿದ ಮಧ್ವ ಮುನಿರಾಯಗೆ 3
********