Showing posts with label ಹಯವದನ ಈ ಭವ ತಾರಿಸೊ ಸುಜ್ಞಾನ ಪ್ರೇರಿಸೊ shyamasundara. Show all posts
Showing posts with label ಹಯವದನ ಈ ಭವ ತಾರಿಸೊ ಸುಜ್ಞಾನ ಪ್ರೇರಿಸೊ shyamasundara. Show all posts

Wednesday, 1 September 2021

ಹಯವದನ ಈ ಭವ ತಾರಿಸೊ ಸುಜ್ಞಾನ ಪ್ರೇರಿಸೊ ankita shyamasundara

..

ಹಯವದನ ಈ ಭವ ತಾರಿಸೊ

ಸುಜ್ಞಾನ ಪ್ರೇರಿಸೊ ಪ

ಮಾಯದ ಮೃಗದ ಬಾಯಿಗೀಡಾದೆ

ಕಾಯುವದಾತರ ಕಾಣೆ ಹರಿಯೆ

ನಾಯಿಯ ತೆರದಲಿ ಮಬ್ಬಿಲಿ ಮೆರೆದೆ

ದೋಷ ನೋಡದೆ ಕಾಯೋ 1

ಬಂದೆನು ಭೂಸುರನಾಗುತ ಜಗದಿ |

ಪೊಂದಿದೆ ತವ ಪದ ಹರಿಯೆ

ನಂದನಸುತ ನೀ ಬಂಧನ ಬಿಡಿಸೋ

ಕಂದನ ಮರೆಯುವರೇನೋ 2

ಮನ್ನಿಸೋ ಶಾಮಸುಂದರವಿಠಲ

ಎನ್ನಯ ಭಾರ ನಿನಗೊಪ್ಪಿಸಿದೆ | ಹರಿಯೆ

ಇನ್ನು ತೋರಿಸೈ ನಿನ್ನಯ ಚರಣ

ಕರುಣಾಭರಣ ದೇವ 3

***