ಯಾಕೆ ನಿರ್ದಯನಾದೆ ಎಲೊ ದೇವನೆ ||ಪ||
ಶ್ರೀಕಾಂತ ಎನ ಮೇಲೆ ಎಳ್ಳಷ್ಟು ದಯವಿಲ್ಲ ||ಅ||
ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನಪ್ಪಿಕೊಂಡೆ
ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ
ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ||
ಸಿರಿದೇವಿಗ್ಹೇಳದೆ ಸೆರಗು ಸಂವರಿಸದೆ
ಗರುಡನ ಮೇಲೆ ಗಮನವಾಗದೆ
ಭರದಿಂದ ನೀ ಬಂದು ಕರಿಯನುದ್ಧರಿಸಿದೆ
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ||
ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ
ಭಜನೆಗವರೇ ಹಿತರೆ ನಾ ನಿನಗೆ ಅನ್ಯನೇ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ ||
****
ರಾಗ ಕಾಂಭೋಜ ಝಂಪೆತಾಳ (raga, taala may differ in audio)
ಯಾಕೆ ನಿರ್ದಯನಾದೆ ಎಲೊ ದೇವನೆ
ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಸಿರಿ ದೇವಿಗೆ ಹೇಳದೆ ಸೆರಗು ಸಂವರಿಸದೆ
ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ
ರಾಗ : ಕಾಂಬೋದಿ ತಾಳ : ಝಂಪೆ
kambhoji - jhame
Yake nirdayanade elo devane
Srikanta enna mele ellashtu dayavilla ||pa||
Kangettu kambadali odedu balali bandu
Hingade prahladana appikonde
Mangalapadavittu manniside ava ninage
Bangaraveshtu kottanu pelo hariye ||1||
Siri devige helade seragu samvarisade
Garudana mele eragi gamanavagade
Baradinda ni bamdu Atana salahide
Kariraja eshtu kanakava kottano hariye ||2||
Ajamilanu annane vibishananu tammane
Nijadi rukmangadanu ninna mommagane
Bajanege avare hitare na ninage anyane
Trijagapati salahenna purandaravithala ||3||
***
pallavi
yAke nirdayanAde elO dEvane
anupallavi
shrIkAnta ena mEle eLLaSTu dayavilla
caraNam 1
kangeTTu kambhadali oDedu baLasi banduhingade prahlAdanappi koNDe
mangaLa padavittu manniside ava ninake bhangAraveSTu koTTanu pELo hariye
caraNam 2
siridEvighELade seragu samvarisade garuDana mElegamanavAgude
bharadinda nI bandu kariyanuddhariside karirAja eSTu kanakava koTTa hariye
caraNam 3
ajAmiLanu aNNane vibhISaNanu tammane nijadi rukmAngadanu ninna mommagane
bhajanegavare hitare nA ninage anyanE trijagapati salahenna purandara viTTala
***
P: yAke nirdayanAdiyo elo dEvane
AP: shrikAntA enamele eLLIshtu dayavilla
C1: kangeTTu kambhadali oDedu baLali bandu hingade prahlAdanappi koNDe
mangaLa padavittu manniside ava ninage bhangAraveSTu koTTanO pELo hariye
C2: siridEvighELade seragu samvarisade garuDana mEle gamanavAgade
bharadinda nI bandu kariyanuddhariside karirAja eSTu kanakava koTTa hariye
C3: ajAmiLanu aNNane vibhISaNanu tammane nijadi rukmAngadanu ninna mommagane
bhajanegavarE hitare nA ninage anyanE trijagapati salahenna purandara viTTala
***
Meaning:
P: why have you become unkind to me O God
AP: O shrikAnta you don’t have even a little (as much as a seasame seed= eLLu) compassion for me?
C1: you came out breaking the pillar, were tired, but went ahead and embraced prahlada, and celebrated him,
how much gold he gave, say it now O hari.
C2: without informing siri (your wife) without getting dressed (?), even without riding the garuda
you went and saved the elephant king in great hurry. How much money the elephant king gave you O hari.
C3: Is ajAmiLa your elder brother? Is vibhIshana your younger brother, Is rukmAngadha really your grandson?
For singing your name, (why) are they preferred? am I unknown to you? protect me the lord of 3 worlds O purandaravithala.
***
ಯಾಕೆ ನಿರ್ದಯನಾದೆ ಎಲೊ ದೇವನೆ
ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ||ಪ||
ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆ
ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ
ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ||೧||
ಸಿರಿ ದೇವಿಗೆ ಹೇಳದೆ ಸೆರಗು ಸಂವರಿಸದೆ
ಗರುಡನ ಮೇಲೆ ಎರಗಿ ಗಮನವಾಗದೆ
ಭರದಿಂದ ನೀ ಬಂದು ಆತನ ಸಲಹಿದೆ
ಕರಿರಾಜ ಎಷ್ಟು ಕನಕವ ಕೊಟ್ಟನೋ ಹರಿಯೆ ||೨||
ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ
ಭಜನೆಗೆ ಅವರೇ ಹಿತರೆ ನಾ ನಿನಗೆ ಅನ್ಯನೇ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ ||೩||
*****
ಯಾಕೆ ನಿರ್ದಯನಾದೆಯೋ ಯಾಕೆ ನಿರ್ದಯನಾದೆಯೋ ಹರಿಯೆ ||ಪ||
ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ||ಅ ಪ||
ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನಪ್ಪಿಕೊಂಡೆ
ಮಂಗಳಪದವಿತ್ತು ಮನ್ನಿಸಿದ ಆವ ನಿನಗೆ
ಬಂಗಾರವೆಷ್ಟು ಕೊಟ್ಟನು ಪೇಳೂ ಹರಿಯೆ ||೧||
ಸಿರಿದೇವಿಗೆ ಹೇಳದೆ ಸೆರಗುಸಂವರಿಸದೆ
ಗರುಡನ ಮೇಲೆ ಗಮನಮಾಡದೆ
ಭರದಿಂದ ನೀ ಬಂದು ಕರಿಯನುದ್ಧರಿಸಿದೆ
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ||೨||
ಅಜಮಿಳನು ಅಣ್ಣನೊ ವಿಭೀಷಣನು ತಮ್ಮನೊ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೊ
ಅವರೆಲ್ಲ ಹಿತರೇನೊ ನಾ ನಿನಗೆ ಅನ್ಯನೊ
ನ್ಯಾಯವಲ್ಲವೊ ತಂದೆ ಪುರಂದರವಿಠಲ ||೩||
*****