Showing posts with label ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಾಘವೇಂದ್ರನ ಕಂಡಿರೇನಮ್ಮ narasimha vittala2. Show all posts
Showing posts with label ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಾಘವೇಂದ್ರನ ಕಂಡಿರೇನಮ್ಮ narasimha vittala2. Show all posts

Monday, 6 September 2021

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಾಘವೇಂದ್ರನ ಕಂಡಿರೇನಮ್ಮ ankita narasimha vittala2

 ankita ನರಸಿಂಹವಿಠಲ (2) 

ರಾಗ: [ಶಹನ] ತಾಳ: [ಆದಿ]


ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಾಘವೇಂದ್ರನ ಕಂಡಿರೇನಮ್ಮ  ಪ


ಅಮ್ಮಾ ನಿಮ್ಮ ಮನೆಗಳಲ್ಲಿ ನಮ್ಮ ಗುರುಗಳ ಕಂಡಿರೇನಮ್ಮ ಅ.ಪ.


ಕಾಲಲಿ ಕಡಾಂವಿಗಿ ಕರದಲ್ಲಿ ದಂಡಕಾಷ್ಟಾ

ಮೈಯೊಳು ಕಾವಿಶಾಟಿ ಪೊತ್ತಿರುವರಮ್ಮ

ಬಂದಬಂದ ಜನರಿಗೆಲ್ಲ ಆನಂದನೀಡುತ

ಛಂದಾಗಿ ತಾಂವು ಇಲ್ಲಿ ಇರುತಿಹರಮ್ಮ 1

ಬಂದಬಂದ ಜನರಿಗೆ ಅಭೀಷ್ಟವನೀಡುತ

ಛಂದಾಗಿ ಅಭಯವ ನೀಡುತಿಹರಮ್ಮ

ಒಂದಿನ ಸ್ವಪ್ನದಿ ಫಲಮಂತ್ರಾಕ್ಷತೆ ಕೊಡುತಲಿ

ಅಂದಿನ ಆನಂದನ ಕಾಣಮ್ಮ 2

ಬಂದಬಂದ ಜನರು ಪ್ರದಕ್ಷಿಣೆ ನಮಸ್ಕಾರ

ತಾಂವ ದಿಂಡುಉರುಳುವರಮ್ಮಾ

ಬಂದಬಂದ ಜನರಿಗೆಲ್ಲಾ ಅಭಯವನೀಡುತ

ತಾಂವ ತುಂಗಾತಟದೊಳು ಇರುತಿಹರಮ್ಮಾ 3

ಮೈಯೊಳು ಕೇಸರಿಗಂಧಾ ಪೂಸಿಸಿದಾರಮ್ಮಾ

ಎದುರಲಿ ಶ್ರೀಕೃಷ್ಣನ ಪೂಜಿಪರಮ್ಮಾ

ಢಾಳ ಅಕ್ಷಂತಿ ತಿದ್ದಿದಅಂಗಾರವು

ಮುದ್ರಿಯು ತಾಂವ್‍ಧರಿಸಿಹರಮ್ಮ 4

ಕರದಲಿ ಜಪಮಾಲೆ ಕೊರಳಲಿ ಕಮಲಾಕ್ಷಿ ತಾವ್

ಧರಿಸಿಹರಮ್ಮಾ ಬಿಡದೆ ನಿರಂತರ

ನರಸಿಂಹವಿಠಲನ ಜಪಿಸುತ

ತಾವೃಂದಾವನದೊಳ್ ಇರುಹರಮ್ಮಾ 5

***