Showing posts with label ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ ಗೋವಿಂದ ನೀನಲ್ಲದೆ purandara vittala HINDILLA SWAMI MUNDILLA GOVINDA NEENALLADE. Show all posts
Showing posts with label ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ ಗೋವಿಂದ ನೀನಲ್ಲದೆ purandara vittala HINDILLA SWAMI MUNDILLA GOVINDA NEENALLADE. Show all posts

Tuesday, 5 October 2021

ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ ಗೋವಿಂದ ನೀನಲ್ಲದೆ purandara vittala HINDILLA SWAMI MUNDILLA GOVINDA NEENALLADE




ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ , ಗೋ-
ವಿಂದ ನೀನಲ್ಲದೆ ಇಹಪರವಿಲ್ಲ ||

ಪರರ ಬೇಡಿಪ್ಪಂತೆ ಗತಿಯಾಯಿತಲ್ಲ
ನರರ ತುತಿಸಿ ನಾಲಿಗೆ ಬರಡಾಯಿತಲ್ಲ
ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲ
ನರಗೆ ಪಾಮರಗೆ ಪಾಪದ ಪಂಜರಗೆ ||

ತನುವು ತನ್ನದಲ್ಲ ತನ್ನವರು ತನಗಿಲ್ಲ
ಅನುಕೂಲವಿರುವಾಗ ಸತಿಸುತರೆಲ್ಲ
ಅನುವು ತಪ್ಪಿ ಮನವು ತಲ್ಲಣಿಸುತಿರುವಾಗ
ವನಜನಾಭ ನೀನಲ್ಲದೆ ಯಾರಿಲ್ಲ ||

ಮಾತಾಪಿತೃ ಬಂಧುಗಳು ಮುಂತಾಗಿ ಸಂ-
ಪ್ರೀತಿಯೊಳಿರಲು ಮನ್ನಿಪರೈ ಎಲ್ಲ
ಕಾತರನಾಗ್ಯಮ ಕೊಂಡೊಯ್ಯುತಿರುವಾಗ ಸಂ-
ಗಾತ ಇನ್ನ್ಯಾರಯ್ಯ ಪುರಂದರವಿಠಲ ||
***

ರಾಗ ಪಂತುವರಾಳಿ ಅಟತಾಳ (raga tala may differ in audio)

pallavi

hindilla svAmi mundillA gOvinda nInallade ihaparavilla

caraNam 1

parara bEDippante gatiyAyitalla narara tutisi nAlige baraDayitalla
paravilla ihavilla narajanma sthiravalla narage pAmarage pApada panjarage

caraNam 2

tanuvu tannadalla tannavar tanagilla anukUlaviruvAga sati sutarella
anuvu tappi mana tallaNisuvAga vanajanAbha nInallade yArilla

caraNam 3

mAtA pitru bandhugaLu muntAgi samprItiyoLiralu manniparai ella
kAtaranAgyama koNDoyyuvAga sangAta inyArayya purandara viTTala
***