Showing posts with label ಕಟ್ಟಿಹಾಕುವೆ ನಿನ್ನ ದಿಟ್ಟ ಕೃಷ್ಣನ shyamasundara. Show all posts
Showing posts with label ಕಟ್ಟಿಹಾಕುವೆ ನಿನ್ನ ದಿಟ್ಟ ಕೃಷ್ಣನ shyamasundara. Show all posts

Friday, 27 December 2019

ಕಟ್ಟಿಹಾಕುವೆ ನಿನ್ನ ದಿಟ್ಟ ಕೃಷ್ಣನ ankita shyamasundara

by ಶ್ಯಾಮಸುಂದರದಾಸರು
ಕಟ್ಟಿ ಹಾಕುವೆ ನಿನ್ನ ದಿಟ್ಟ ಕೃಷ್ಣನ
ಬೆಟ್ಟದೊಡೆಯನೆ ನಿನ್ನ ಬಿಟ್ಟರೆ ಸಿಗಲಾರೆ ||ಪ||

ತುಂಟತನ ಬೇಡವೆಂದರೂ ಕೇಳದಲೆ
ನೆಂಟನಾಗುವೆ ನೀನು ಗೋಪಾಲರಿಗೆಲ್ಲ
ಒಂಟಿ ನೀನೀಗ ಸಿಕ್ಕಾಗ ಕಟ್ಟದಿರೆ
ಎಂಟೆಂಟು ಸಾವಿರ ಗೋಪಿಯರ ಕೂಡುವಿಯೊ ||೧||

ಕಡುಮೋಹ ಬೀರುತಲಿ ಕಡಗೋಲು ಪಿಡಿದಿರುವೆ
ಒಡೆಯ ನಿನ್ನಯ ಹೇಗೆ ಬಂಧಿಸಿರಲಿ
ಪಡೆದ ಜನನಿಯ ತೆರದಿ ಜಗವ ರಕ್ಷಿಪ ದೇವ
ಬಿಡಲೊಲ್ಲೆ ಬಿಡಲೊಲ್ಲೆ ಭಕ್ತಿ ಪಾಶದಿ ಇಂದೇ ||೨||

ಯುಕ್ತಿಮಾತುಗಳಿಂದ ಮರುಳುಗೊಳಿಸಲು ಬೇಡ
ಮುಕ್ತಿದಾಯಕ ನಿನ್ನ ಬೇಡಿಕೊಳ್ಳುವೆ
ಶಕ್ತ ಗುರುಶಾಮಸುಂದರನೆ ನೀನಾಗಿ
ಭಕ್ತರಾಧೀನನಾಗುತಲಿ ಕರನೀಡೆ ||೩||
*******