Showing posts with label ಪಾಲಸಾಗರ ಸಂಭೂತೆ ಕೈವಲ್ಯದಾತೆ ಪಾಲಿಸೆನ್ನನು ನಿಜಮಾತೆ gurujagannatha vittala. Show all posts
Showing posts with label ಪಾಲಸಾಗರ ಸಂಭೂತೆ ಕೈವಲ್ಯದಾತೆ ಪಾಲಿಸೆನ್ನನು ನಿಜಮಾತೆ gurujagannatha vittala. Show all posts

Sunday, 5 December 2021

ಪಾಲಸಾಗರ ಸಂಭೂತೆ ಕೈವಲ್ಯದಾತೆ ಪಾಲಿಸೆನ್ನನು ankita gurujagannatha vittala PAALASAAGARA SAMBHOOTE KAIVALYADAATE PALISENNANU



on Lakshmidevi

ಪಾಲಸಾಗರ ಸಂಭೂತೆ ಕೈವಲ್ಯದಾತೆ

ಪಾಲಿಸೆನ್ನನು ನಿಜಮಾತೆ ಪ


ಆಲಿಸು ನಿನ್ನಯ ಬಾಲನ ನುಡಿ ಈ

ಕಾಲದಿ ಮನ್ಮನ ಆಲಯದೊಳು ನಿಂದು ಅ.ಪ


ಶ್ರೀ ಮಾ ರಮಾ ಲಕುಮಿ ಕಮಲೆ ನಿತ್ಯ ನಿರ್ಮಲೆ

ಈ ಮಹಾಮಹಿಮ ವಿಶಾಲೆ

ಕಾಮನ ಜನನಿ ಸುಲೀಲೆ ಜಲಜಸುಮಾಲೇ

ಕಾಮಿಪ ಜನರ ಸುರಸಾಲೆ

ತಾಮರಸಾಂಬಕೆ ಸಾಮಜಭವ ಸು -

ತ್ರಾಮ ಪ್ರಮುಖ ಸುರಸ್ತೋಮ ನಮಿತಗುಣ -

ಧಾಮೆ ನಿನ್ನಯ ಪಾದ ಯಾಮ ಯಾಮಕೆ ನಿತ್ಯ

ನೇಮದಿ ಭಜಿಪೆ ಶ್ರೀರಾಮನ ತೋರೆ 1


ವೇದಾಭಿಮಾನಿ ಅಂಬ್ರಾಣಿ ಸುಗಣಸನ್ಮಣಿ

ವೇದವತಿಯೆ ರುಕ್ಮಿಣಿ

ವೇದವಂದ್ಯಳೆ ಗುಣಪೂರ್ಣೇ ನಿತ್ಯಕಲ್ಯಾಣಿ

ಮೋದದಾಯಕೆ ಗೀರ್ವಾಣಿ

ಖೇದಗೊಳಿಸುವ ಭವೋದಧಿ ದಾಟಿಸಿ

ಮೋದ ಕೊಡುವ ಪಂಚಭೇದಮತಿಯನಿತ್ತು

ಯಾದವಗುಣವನುವಾದ ಮಾಡಿಸಿ ನಿತ್ಯ

ಮೋದಬಡಿಸು ಶ್ರೀ ಮಾಧವರಾಣಿ 2


ಜಾತರೂಪಾಭಾಶುಭಗಾತ್ರಿ ಈ ಜಗಕೆ ಧಾತ್ರಿ

ಸೀತೆ ನೀನೆ ಲೋಕಪವಿತ್ರೆ

ಧಾತಾಪ್ರಮುಖಸುರಸ್ತೋತ್ರೇ ನೀರಜನೇತ್ರೆ

ವೀತಭಯಳೆ ತ್ರಿನೇತ್ರೇ

ಪಾತಕವನಕುಲವಿತಿಹೋತ್ರ ಸುರ -

ವ್ರಾತ ವಿನುತ ಸುಖವ್ರಾತ ಕೊಡುವ ನಮ್ಮ

ದಾತ ಗುರುಜಗನ್ನಾಥವಿಠಲಗೆ ನೀ

ನೀತಸತಿಯೆ ಎನ್ನ ಮಾತೆ ವಿಖ್ಯಾತೆ3

***