Showing posts with label ಪದುಮನಾಭನೆ ಏನೆಂತಾಡಿದ್ಯೊ pranesha vittala. Show all posts
Showing posts with label ಪದುಮನಾಭನೆ ಏನೆಂತಾಡಿದ್ಯೊ pranesha vittala. Show all posts

Wednesday, 13 November 2019

ಪದುಮನಾಭನೆ ಏನೆಂತಾಡಿದ್ಯೊ ankita pranesha vittala

by ಪ್ರಾಣೇಶದಾಸರು
ಪದುಮನಾಭನೆ ಏನೆಂತಾಡಿದ್ಯೊ |ವದಗಿ ಬಂದವರಿಗೆ ಎದೆಗಲ್ಲಿನಂತೆ ಪ

ಸ್ವರ ಕೇಳಿದಾಕ್ಷಣಸ್ಮರಬಾಧೆ ಹೆಚ್ಚಿ ಜ- |ರ್ಝರಿತರಾದೆವೊ ಕೇಳೊ ತರುಣಿಯರೆಲ್ಲ 1

ಯೋಗೇಶ ನಿನ ನೋಡ ವೇಗದಿಂ ಬಂದೆವೊ |ಹೋಗೆಂದು ನಿನ್ನ ನಾಲಿಗೀಗೆಂತು ಬಂತೋ 2

ನಾರೆರಲಂಕಾರ ಸೀರಿ ಹಂಬಲ ಬಿಟ್ಟು |ಸಾರಿದರೆಂದು ವಿಚಾರಿಸಲಿಲ್ಲೆ 3

ಪತಿಗಳು ಹುಡುಕೊರೆಂದತಿ ಕರುಣವರಲ್ಲೆ |ಚ್ಯುತನಾವೆ ನಿನಗೆ ಅಹಿತರಾದೆವೇನೋ 4

ಆಗಾರತೊರೆದು ಸುಭೋಗವಿತ್ತೆವೋ ನಿ- |ನಗೀಗ ಮರದಿ ನಮ್ಮ ಕೈಗುಣವೇನೋ 5

ವಾರಿಜಬಾಣಕ್ಕೆ ಆರಲಾರಿವೊ ದಯಾ |ವಾರಿಧಿಕಾಮನಾ ಪೂರತಿ ಮಾಡೋ 6

ಪ್ರಾಣೇಶ ವಿಠಲ ನೀ ಮಾನವರಂತಲ್ಲ |ಪ್ರಾಣದ ಪದಕ ಈಗೇನು ಕಲ್ಲಾದ್ಯೊ 7
*******