Showing posts with label ಶಿವನಂದನ ಸುಬ್ರಹ್ಮಣ್ಯ ದೇವಸೇನಾ ಹೃದಯ ವಿಹಾರ venkatanatha. Show all posts
Showing posts with label ಶಿವನಂದನ ಸುಬ್ರಹ್ಮಣ್ಯ ದೇವಸೇನಾ ಹೃದಯ ವಿಹಾರ venkatanatha. Show all posts

Saturday, 1 May 2021

ಶಿವನಂದನ ಸುಬ್ರಹ್ಮಣ್ಯ ದೇವಸೇನಾ ಹೃದಯ ವಿಹಾರ ankita venkatanatha

  " ಶ್ರೀ ಸುಬ್ರಹ್ಮಣ್ಯ ಸ್ತುತಿ "

ರಚನೆ : ಆಚಾರ್ಯ ನಾಗರಾಜು ಹಾವೇರಿ

ಮುದ್ರಿಕೆ : ವೆಂಕಟನಾಥ

ಶಿವನಂದನ ಸುಬ್ರಹ್ಮಣ್ಯ ।

ದೇವಸೇನಾ ಹೃದಯ ವಿಹಾರ ।। ಪಲ್ಲವಿ ।।

ಬ್ರಹ್ಮ ಕುಮಾರ ಸನತ್ಕುಮಾರ ।

ಬ್ರಹ್ಮರಸನ ಸುತ ಪ್ರದ್ಯುಮ್ನ ।। ಚರಣ ।।

ಕಾಮಹರ ಕೈವಲ್ಯಪತಿ ।

ಕಾಮಿತಪ್ರದಾತ ನರಹರಿ ದೂತ ।। ಚರಣ ।।

ವಲ್ಲೀ ನಾಯಕಾ ಕುಕ್ಕೆ ಪುರೀಶ ।

ಫುಲ್ಲಾಕ್ಷ ವೆಂಕಟನಾಥ ವಾಸುಕೀ ಪ್ರೇಷ್ಠ ।। ಚರಣ ।।

****