Showing posts with label ಜೈ ಭೀಮ ಜರೆಸುತನ್ವೈರಿ ಜೈ ಭೀಮ bheemesha krishna. Show all posts
Showing posts with label ಜೈ ಭೀಮ ಜರೆಸುತನ್ವೈರಿ ಜೈ ಭೀಮ bheemesha krishna. Show all posts

Tuesday 1 June 2021

ಜೈ ಭೀಮ ಜರೆಸುತನ್ವೈರಿ ಜೈ ಭೀಮ ankita bheemesha krishna

ಜೈ ಭೀಮ ಜರೆಸುತನ್ವೈರಿ ಜೈ ಭೀಮ

ಜಯ ಜಯ ಜಯ ಮುಖ್ಯಪ್ರಾಣ

ಸೋಮ ಕುಲದೊಳುದ್ಭವಿಸಿ ಗೀರ್ವಾಣ

ಬಲು ಬಲುಮೆಯಿಂದಲಿ ದುರ್ವಾದಿಗಳನ್ನೆ

ಮೂತಿಂದ್ವೊತ್ತಿ ಸಲಹೆನ್ನ ಶ್ರೀಮ-

ದಾನಂದತೀರ್ಥಮುನಿ ಪ


ರೋಮ ರೋಮಕೆ ಕೋಟಿಲಿಂಗ

ಜಗತ್ಪ್ರಾಣಿಗಳಿಗೆ ಅಂತರಂಗ

ಲಂಕೆನಾಳ್ವೋ ಭೂಪತಿಗತಿ

ಭಂಗಬಡಿಸಿ ಕ್ಷೋಣಿಸುತೆಗೆ

ಉಂಗುರಿಟ್ಟು ರಾಮರಲ್ಲೆ ಪ್ರೇಮ-

ವಾರ್ತೆಯ ತಂದ ಪ್ರಾ-

ಣೇಶ ದಯವಾಗೊ 1


ಮಧುವೈರಿ ಮಾತುಳನಾಗೆ ಬಂದು

ಮಗಧ ಮುತ್ತಿಗೆ ಹಾಕೆ ಬ್ಯಾಗ

ಶ್ರೀಧರನಿಂದ ಪರಾಜಿತನಾಗಿ

ವೃಕೋದರ ಛಲವ್ಹಿಡಿದು ತಾ ಹೋಗೆ

ಅಲ್ಲೆ ದ್ವಿಜನ್ವೇಷಧರಿಸ್ವಾಸುದೇವ

ವಾಸವಿ ಕೂಡಿ ಮಗಧರಾಜನ ಮ-

ರ್ಮಗಳಿಂದ ಸೀಳಿದ್ಯೊ 2


ಹಾಟಕಾಂಬರನಲ್ಲಿ ಭಕ್ತರೆಂದು

ಅರಿಯದೆ ಅಂತಕನ ಪುತ್ರ(ನ)

ಜೂಜಿನಾಟ(ದಿ) ಸೋಲಿಸಿ ಸೆಳೆಯೆ

ವಸ್ತ್ರ ಕೃಷ್ಣೆ ನೋಟದಿ ಭಸ್ಮ

ವಿಚಿತ್ರ ಸವ್ಯಸಾಚಿ ಸಹಿತವಾಗ್ವಿರಾಟ-

ವರ್ಗದಿ ಸತಿಗೆ ಕಾಟ ಕಳೆದ್ಯಮ-

ಪುರಿಗೆ ದಾಟಿಸ್ದ್ಯೋ ಕೀಚಕನ 3


ಕಳೆದÀು ಅಲ್ಲಜÁ್ಞತವಾಸ ಬಂದು

ಖಳರೊಳಗಧಿಕ ದುಶ್ಶಾಸ(ನ) ಅವನ

ಕರುಳ ಬಗೆಯಲತಿ ರೋಷ

ಕಾಲಕ್ಕೊದಗಲು ನರಹರಿ ಆ-

ವೇಶ ಕಂಡು ಸುರರಸುರರ ಸೈನ್ಯ

ಜರಿದು ಹಿಂದಕೆ ನಿಲ್ಲೆ ರಣಧೀರ-

ಗೆಣೆಯಿಲ್ಲ ಪರಮ ಪರಾಕ್ರಮ 4


ಸಕಲ ಜೀವರಿಗಾಧಾರಕನೊ

ಭಾರತಿ ಪ್ರಾರಂಭಕ್ವೊಂದಿತನೊ

ಮಧ್ವಮತ ಶಾಸ್ತ್ರಗಳ ಉದ್ಧಾರಕÀನೊ

ತ್ರಿಗುಣ ಜೀವನು ಸಾರಪ್ರೇರಕನು

ವಾಯು ಸಕಲ ಸುರರೊಡೆಯ

ಭೀಮೇಶ ಕೃಷ್ಣನಲ್ಲಿ ಭಕುತಿ ಜÁ್ಞನವ

ದಿವ್ಯ ಮುಕುತಿ ಮಾರ್ಗವ ತೋರಿದಿ 5

****