..
ವಿಜಯದಾಸ ಧೀರರೆಂಬೊ ಅಂಬುಜ ಮಿತ್ರನುದಯಿಸಲುಭಜಕರಜ್ಞಾನ ತಿಮಿರ ಭರದಿ ಬಿಟ್ಟೋಡಿತು ಪ
ಶ್ರುತಿ ಶಾಸ್ತ್ರವೆಂಬ ಕಂಜಗಳತಿ ರಮ್ಯದಿಂದರಳಿದವುಕ್ಷಿತಿಯೋಳು ಕುಮುದದಂತೆ ದುರ್ಮತಗಳೆಲ್ಲ ಕುಗ್ಗಿದವು ||ಇತರ ದೇವಂಗಳಿಂತು ಭಜಿಸಿದೆ ರಘುಪತಿಯೆ ದೈವ ಮಧ್ವ ಮತವೆ ಸಿದ್ಧಾಂತವುಸತತವನು ಹರಿ ಸರ್ವೋತ್ತಮನೆಂದುತುತಿಸುವ ಕಾಂತಿಯು ತುಂಬಿತು ಜಗದೊಳು 1
ಚೋರ ಮಾಯಾವಾದಿಗಳೆಂಬ ತಾರೆಗಳಡಗಿ ಪೋದವುಸಾರುವ ವಿಬುಧ ಜನರೆಂಬೊ ಚಕ್ರವಾಕ ಧ್ವನಿಗೈದವು ||ಸಾರಿ ಸಾರಿಗೆ ಹೊತ್ತು ಯೇರುವ ತೆರದಲಿಶ್ರೀರಮಣನ ಚರಣಾರವಿಂದವು ನಿತ್ಯಆರಾಧಿಸುವ ವಿಚಾರವಿದೆನುತಲಿತಾರತಮ್ಯ ಜ್ಞಾನ ತೋರಿದರಿಳಿಯೊಳು 2
ಅಂದವಾದಲಾದಿನ್ನೆ ಹನುಮಂತನೊಡೆಯ
..missing (ಮುಂದಿನ ಪಾದಗಳು ಸಿಕ್ಕಿಲ್ಲ)
***