Showing posts with label ನೋಡೆ ಗೋಪೀ ಗೋಕುಲದೊಳು ಹರಿ purandara vittala. Show all posts
Showing posts with label ನೋಡೆ ಗೋಪೀ ಗೋಕುಲದೊಳು ಹರಿ purandara vittala. Show all posts

Friday, 6 December 2019

ನೋಡೆ ಗೋಪೀ ಗೋಕುಲದೊಳು ಹರಿ purandara vittala

ಪುರಂದರದಾಸರು
ನೋಡೆ ಗೋಪೀ ಗೋಕುಲದೊಳು ಹರಿ|ಮಾಡುವ ಲೀಲೆಗಳ ಪ್ರತಿಯಮ್ಮ ಪ

ರಂಗನೆತ್ತಿ ಸಂಭ್ರಮದಿಂದಲಿ |ಅಂಗಣದೊಳಗೆ ನಿಂದಾಡಿಸಲು ||ತಿಂಗಳ ಬಿಂಬವ ಕಂಡಾಕ್ಷಣ ತ-|ನ್ನಂಗೈಯೊಳಗೇ ನಿಲಿಸಿಕೊಡೆಂಬ 1

ಚಿನ್ನನು ನೋಡಲಿ ಎಂದಕ್ಕರದಲಿ |ಕನ್ನಡಿಯನು ತಂದು ಕೈಯಲಿ ಕೊಡಲು ||ತನ್ನ ಮುಖದ ಪ್ರತಿಬಿಂಬವ ಕಂಡು ಅ-|ದನ್ನು ಕರೆದು ಬಳಿಯಿರಿಸಿರಿಯೆಂಬ 2

ಅರಿಯದೆ ದೀಪವ ಕೆಂಪಗೆ ಕಂಡು |ಸೆರಗಿನಲ್ಲಿ ಕೊಡು ಆಡುವೆನೆಂಬ ||ಕರುವಿನಂತೆ ತನ್ನನು ಕೊಂಡೊಯ್ದು |ತುರುಗಳ ಮೊಲೆಯನು ಉಣಿಸಿರಿಯೆಂಬ 3

ಪರಿಪರಿಯಿಂದಲಿ ಗೋಡೆಯ ಮೇಲೆ |ಬರೆದಿಹ ಚಿತ್ರದ ಗೊಂಬೆಯ ನೋಡಿ ||ಕರವಪಿಡಿದು ಎಳೆತಂದು ತನ್ನಯನೆರೆಯಲ್ಲಿಯೆ ನೀವಿರಿಸಿರಿಯೆಂಬ 4

ತರುಣಿ ನಿನ್ನಯ ಸುಕೃತದ ಫಲವು |ಹರುಷವೆಮಗೆ ಅಭಿವೃದ್ಧಿಯಾಗಿಹುದು ||ಪುರಂದರವಿಠಲನ ಚರಿಯವ ನೋಡಲು |ಧರೆಯೊಳಗಿನ ಬಾಲಕರಂತಲ್ಲವೆ 5
***

pallavi

nODe gOpi gOkuladoLu hari mADuva lIlegaLapratiyamma

caraNam 1

rangananetti sambhramadindali angaNadoLage nindADisalu
tingaLa bimbava kaNDAkSaNa tannagaiyoLage nilisi koDemba

caraNam 2

cinnanu nODali endakkaradali kannaDiyanu tandu kaiyali koDalu
tanna mukhada pratibimbava kaNDu adannu karedu baLiyirisiriyemba

caraNam 3

ariyade dIpava kempage kaNDu seraginalli koDu Aduvenemba
karuvinante tannanu koNDoidu turugaLa moleyanu uNisiriyemba

caraNam 4

paripariyindali koDEya mEle parediha citrada gombeya nODi
karava piDidu eLetandu tannaya nereyalliye nIvirisiriyemba

caraNam 5

taruNi ninnaya sukrtada balavu haruSavemage abhivrddhiyAgihudu
purandara viTTalana cariyava nODalu dhareyoLagina bAlakarantallave
***