Showing posts with label ನಿನ್ನ ನಂಬಿದ ನರಗೆ ಅನ್ಯರಾಶ್ರಯ venugopala vittala vijaya dasa stutih. Show all posts
Showing posts with label ನಿನ್ನ ನಂಬಿದ ನರಗೆ ಅನ್ಯರಾಶ್ರಯ venugopala vittala vijaya dasa stutih. Show all posts

Friday, 27 December 2019

ನಿನ್ನ ನಂಬಿದ ನರಗೆ ಅನ್ಯರಾಶ್ರಯ ankita venugopala vittala vijaya dasa stutih

ನಿನ್ನ ನಂಬಿದ ನರಗೆ ಅನ್ಯರಾಶ್ರಯವೇಕೋಚನ್ನ ಗುರು ವಿಜಯರಾಯ
ಬನ್ನ ಬಡುವೆನೊ ಜೀಯ ಘನ್ನ ಭವದೊಳು ಶಿಲ್ಕಿಇನ್ನು ಕಡೆಗ್ಹಾಕೋ ಬ್ಯಾಗ ಈಗ ||pa||

ಸಪ್ತ ದ್ವೀಪಾಧಿಪನ ಪುತ್ರನೊಬ್ಬನ ಪರರಭೃತ್ಯನಾಗುವುದುಚಿತವೆ
ವತ್ತಿ ಸುರನದಿ ನರನ ಸುತ್ತ ಪರಿಯಲು ನೀರಿಗಾರ್ತನಾಗುವುದುಚಿತವೆ
ಮತ್ತೆ ಸುರಧೇನುವಿನ ಹತ್ತಿಲಿರುವ ಯಿನ್ನುಹಸ್ತು ಬಳಲುವುದುಚಿತವೆ
ನಿತ್ಯ ಸುಖದಾರಿ ವಿಚಿತ್ರ ನೀ ತೋರೆ ನಾಹಸ್ತ ನರಗೊಡ್ಡುವುದು ಯತ್ನ ಉಚಿತವೆ ಗುರುವೆ ||1||

ಕ್ಷೀರವಾರಿಧಿ ಸೇರಿ ನೀರ ಮಜ್ಜಿಗೆಗಾಗಿಚೀರಿ ವರಲುವುದುಚಿತವೆ |
ನೂರಾರು ವಸನದ ಹೇರು ಮನೆಯೊಳಗಿರಲುಕೋರಿ ವುಡುವುದು ವುಚಿತವೆ |
ವಾರವಾರಕೆ ಹರಿಯ ತೋರುವರನ ಬಿಟ್ಟುಕ್ರೂರ
ವನ ಸೇವಿಸುವ ದಾರಿಗುಚಿತವೊ ಗುರುವೆ ||2||

ಸಾಕಿ ಸಲಹೆಂದು ಅತಿ ವ್ಯಾಕುಲದಿ ಬಂದವನನೂಕಿ ಬಿಡುವುದುಚಿತವೆ |
ಬೇಕಾದ ವರವು ನೀ ಲೋಕರಿಗೆ ಕೊಡುವೆನ್ನಕಾಕುಗೊಳಿಸವುದುಚಿತವೆ |
ಏಕ ಬುದ್ಧಿಯಿನಿತ್ತು ಜೋಕೆ ಮಾಡೆ ಮನ-ನೇಕ ಮಾಡುವದುಚಿತವೆ |ಶ್ರೀ
ಕಾಂತ ವೇಣುಗೋಪಾಲ ವಿಠಲ ನಿನ್ನವಾಕು ಮನ್ನಿಸಲು ನಾ ಕೆಡುವದುಚಿತವೆ ಗುರುವೆ ||3||
*******