vibudhendra teertha rayara mutt yati stutih
ರಾಗ : ಭೈರವಿ ತಾಳ : ರೂಪಕ
ತಿರುನಲ್ವೇಲಿಲಿ ಮೆರೆವ ।
ಗುರು ವಿಬುಧೇಂದ್ರರ ।
ಚರಣ ವಾರಿಜ ಸ್ತುತಿಪೆ ।। ಪಲ್ಲವಿ ।।
ವರ ಅಹೋಬಲ ಹರಿಯು ಸ್ವಪ್ನದಿ ।
ದೊರೆಯುವೆ ನಿಮಗೆ ಪರಮ ತೀರ್ಥರೆನೆ ।
ನರಹರಿ ಹದಿನಾರು ಭುಜದಲಿ ।
ತ್ವರ ಸುತೀರ್ಥದಿ ಬರಲಿಗೊಂಡಂಥ ।। ಅ ಪ ।।
ರಘುನಾಥ ಭಟ್ಟರೆನಿಸಿ ಪೂರ್ವದಿ ।
ಸುಗುಣ ಪಂಡಿತರೆನಿಸೆ ।
ಜಗದ ಬುಧರಿಂದ ಮಾನ್ಯರೆನಿಸಿದ ।।
ನಗೆ ಮುಖ ರಾಮಚಂದ್ರೆತಿ ।
ಮಿಗೆ ಸುಸಂಸ್ಕಾರದಿ ಯತಿಯಗೈಯ್ಯೆ ।
ನಿಗಮ ಶಾಸ್ತ್ರದ ಪಥದಿ ನಡೆದಂಥ ।। ಚರಣ ।।
ಆದಿ ಶ್ರೀಪಾದರಾಜರಿಗೆ ಶ್ರೀ ವ್ಯಾಸರಾಜರಿಗೂ ।
ಮೋದದಿ ವಿದ್ಯಾ ಬೋಧಕರು ।
ವಾದದಿ ದುರ್ವಾದಿಗಳ ಗೆದ್ದು ।।
ಸಾಧಿಸಿ ಜಯ ಪತ್ರ ಪ್ರತಿದಿನ ।
ಮಾದೇವಿ ನರಹರಿಗೆ ಅರ್ಪಿಸಿ ।
ಭೇದಮತ ಧ್ವಜ ಎತ್ತಿ ಮೆರೆದಂಥ ।। ಚರಣ ।।
ಐವತ್ತೈದು ವರ್ಷ
ಶ್ರೀವೇದಾಂತ ರಾಜ್ಯವಾಳಿ ।
ಕೋವಿದರನು ಪೋಷಿಸಿ ।
ಭಾವ ಶುದ್ಧಿಲಿ ಲಯವ ಚಿಂತಿಸಿ - ।।
ಶ್ರೀಶ ಲಕುಮೀಶನಂಘ್ರಿಯ ।
ತೋಷದಿಂದಲಿ ಒಲಿಸಿ । ಮಾರ್ಗಶಿ ।
ರ ಶುದ್ಧ ದಶಮಿ
ವೃಂದಾವನ ಸೇರ್ದ ।। ಚರಣ ।।
****