Shreeraksha Hegde Poornaprajna college Udupi 2023
Dwadasha Stotra by Bannaje (stotra 7)
Lyrics
ಜಗದ ಇರವು ಮೇಣಳಿವು ಹುಟ್ಟು ಐಸಿರಿಯ ಹಿರಿಯ ಯೋಗ |
ಬಾಳು ತಿಳಿವು ನಿಯಮನವು ಅಂತೆ ಅಜ್ಞಾನ ಬಂಧ ಮೋಕ್ಷ Il
ಯಾವ ರಮೆಯ ಕಡೆಗಣ್ಣ ನೋಟಕೀ ಎಲ್ಲ ನಡೆಯುತಿಹುದೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || 1 ||
ಬ್ರಹ್ಮ ರುದ್ರ-ದೇವೇಂದ್ರ-ಸೂರ್ಯ-ಯಮಧರ್ಮ-ಚಂದ್ರರಾದಿ |
ಸುರರ ಗುಂಪು ಈ ಜಗದ ವಿಜಯವನ್ನು ತಿಳಿವಿಗೆಟುಕದಂಥ ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನಡೆಯುತಿಹುದೊ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || 2 ||
ಧರ್ಮನಿರತ ಸಜ್ಜನರ ಪೂಜೆಯನು ಕೊಳುವ ದೇವತೆಗಳೂ |
ಸತ್ಯದರಿವು-ಧರ್ಮಾರ್ಥ-ಕಾಮ-ಮುಂತಾದ ಮಂಗಲವನು ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೀಡುತಿಹರೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || 3 ||
***
English Transliteration
jagada iravu menalivu huttu aisiriya hiriya yoga |
balu tilivu niyamanavu ante ajnana bandha moksa Il
yava rameya kadeganna notaki ella nadeyutihudo |
anthavalanu tanna melunotadinda kapiduva harige namanam || 1
brahma rudra-devendra-surya-yamadharma-candraradi |
surara gumpu i jagada vijayavannu tilivigetukadantha
yava rameya kadeganna notadasrayadi nadeyutihudo |
anthavalanu tanna melunotadinda kapiduva harige namanam || 2
dharmanirata sajjanara pujeyanu koluva devategalu |
satyadarivu-dharmartha-kama-muntada mangalavanu
yava rameya kadeganna notadasrayadi nidutiharo |
anthavalanu tanna melunotadinda kapiduva harige namanam || 3
***