ರಾಗ ಶಾಮಕಲ್ಯಾಣಿ ಛಾಪುತಾಳ
ಕಾಲಿಗೆ ಬಿದ್ದೆನೊ ಕೈಯ ಬಿಡೊ
ಬಾಳು ಬದುಕು ಮುತ್ತೈದಾಗಿ ||ಪ||
ಅಧರ ಚುಂಬಿಸದಿರೊ ರಂಗಯ್ಯ
ಅಧರ ಸವಿಯೆಂದು ಸವಿದೆನೆ ||
ಎದೆಯ ಮುಟ್ಟದಿರೊ ಎಲೊ ರಂಗ
ಅದು ಮರದ ಮೊಗ್ಗೆಂದು ಪಿಡಿದೆನೆ ||
ಅತ್ತೆ ಕಂಡರೆ ರಚ್ಚೆನಿಕ್ಕೋಳು , ಅವ-
ಳಿತ್ತ ಬಂದರೆ ಮರುಳಾಗುವಳೆ ||
ಗಂಡ ಕಂಡರೆ ಎನ್ನ ಕೊಂದಾನು , ಎದೆ
ಗುಂಡಿಗೆಷ್ಟು ಇಲ್ಲಿ ಬರಲಿಕ್ಕೆ ||
ನಾದಿನಿ ಎನ್ನಯ ಸೇರಳು , ಅತಿ
ಮೋದವಾಗಿ ಇಬ್ಬರಾಳುವೆ ||
ಮನವೆ ಕೊಂಬವರೆಲ್ಲದೆರಗಳು , ಎನ್ನ
ಪುರಂದರವಿಠಲನೆಂದರಿಯೇನೆ ||
***
ಕಾಲಿಗೆ ಬಿದ್ದೆನೊ ಕೈಯ ಬಿಡೊ
ಬಾಳು ಬದುಕು ಮುತ್ತೈದಾಗಿ ||ಪ||
ಅಧರ ಚುಂಬಿಸದಿರೊ ರಂಗಯ್ಯ
ಅಧರ ಸವಿಯೆಂದು ಸವಿದೆನೆ ||
ಎದೆಯ ಮುಟ್ಟದಿರೊ ಎಲೊ ರಂಗ
ಅದು ಮರದ ಮೊಗ್ಗೆಂದು ಪಿಡಿದೆನೆ ||
ಅತ್ತೆ ಕಂಡರೆ ರಚ್ಚೆನಿಕ್ಕೋಳು , ಅವ-
ಳಿತ್ತ ಬಂದರೆ ಮರುಳಾಗುವಳೆ ||
ಗಂಡ ಕಂಡರೆ ಎನ್ನ ಕೊಂದಾನು , ಎದೆ
ಗುಂಡಿಗೆಷ್ಟು ಇಲ್ಲಿ ಬರಲಿಕ್ಕೆ ||
ನಾದಿನಿ ಎನ್ನಯ ಸೇರಳು , ಅತಿ
ಮೋದವಾಗಿ ಇಬ್ಬರಾಳುವೆ ||
ಮನವೆ ಕೊಂಬವರೆಲ್ಲದೆರಗಳು , ಎನ್ನ
ಪುರಂದರವಿಠಲನೆಂದರಿಯೇನೆ ||
***
pallavi
kAlige biddeno kaiya biDO bALu baduku mattaidAgi
caraNam 1
adhara kambisadiro rangayya adhara saviyendu savidEne
caraNam 2
edeya muTTadiro elo ranga adu marada moggendu piDidEne
caraNam 3
atte kaNDare racceLikkOLu avaLitta bandare maruLAguvaLe
caraNam 4
gaNDa gaNDare enna kondAnu ede guNDigeSTu illi baralikke
caraNam 5
nAdini ennanu sEraLu ati mOdavAgi ibbarALuve
caraNam 6
manave kombuvarelladeragaLu enna purandara viTTalanendariyeyEne
***