ಮರುದಂಶ ಮಧ್ವಮುನಿರನ್ನ ನಿನಗೆಸರಿಗಾಣೆ ಜಗದೊಳಗೆ ಸರ್ವರೊಳು ಪೂರ್ಣ ಪ.
ಹಿಂದೆ[ರಾಮರು] ಮುಂದೆ ಬಂಟನಾಗಿ ನೀ ನಿಂದೆಚಂದ್ರದ್ರೋಣದ ಗಿರಿಯ ತಂದೆ ದನುಜರ ಕೊಂದೆ[ಎಂದೆಂದಿಗಳಿವಿಲ್ಲದ]ಬ್ರಹ್ಮ ಪದವಿಗೆ ಸಂದೆಇಂದ್ರಾದಿ ಸುರರುಗಳ ತಂದೆ ಸ್ವಾಮಿಇಂದೆಲ್ಲರಿಗೆ ನೀನು ಗುರುವೆನಿಸಿ ನಿಂದೆ 1
ಕೌರವ ಬಲವ ತರಿದೆ ಕೀಚಕನ ಕುಲವ ಮುರಿದೆಒರ್ವನೆ ಬೇಸರದೆ ಷಡ್ರಥಿಕರನು ಗೆಲಿದೆಉರ್ವಿಯೊಳು ಭುಜಬಲದಿ ಭೀಮನೆನಿಸಿ ಮೆರೆದೆ ಹರಿಯ ಕಿಂಕರರ ಪೊರೆದು ಈಗಸರ್ವವನು ತೊರೆದು ಶಾಸ್ತ್ರಾಮೃತವಗರೆದೆ 2
ದುರುಳವಾದಿಗಳೆನಿಪ ಘನತಾಮಸಕೆ ದಿನಪಸಿರಿಯರಸ ಹಯವದನಪದಕಂಜಯುಗಮಧುಪಗುರುಮಧ್ವಮುನಿಪ ನಿರ್ಲೇಪ ಶುದ್ಧಸ್ಥಾಪ ವರ-ವಿದ್ಯಾಪ್ರತಾಪ ಭಾಪುರೆಪರಮಪಾವನರೂಪ ಭಳಿರೆ ಪ್ರತಾಪ 3
***