..
ಮಂಗಳಾರತಿ ಮಾಡಿರೆ ಮುದ್ದು ಅಂಗನೆಯರು ಪಾಡಿರೆ
ಮಂಗಳಾರತಿ ಮಾಡಿ ಅಂಗನೆಯರು ಪಾಡಿ
ರಂಗರುಕ್ಮಿಣಿ ಸತ್ಯಭಾಮೆಗೆ ಬಂಗಾರದ ಪ
ಮಂಟಪದೊಳು ಸತಿಯರೆಂಟುಮಂದಿಯು ಕೂಡಿ
ಒಂಟಿಮುತ್ತೊ ್ಹಳೆವೊ ವೈಕುಂಠಪತಿಗೆ ಬ್ಯಾಗ 1
ವಾರಿಜಾಕ್ಷಿಯರ್ಹದಿನಾರುಸಾವಿರ ಮಂದಿ
ಮಾರನಯ್ಯನ ಮುದ್ದು ಮಕ್ಕಳ ಸಹಿತಾಗಿ 2
ಎಡಬಲ ತೊಡೆಯಲ್ಲಿ ಮಡದಿ ರುಕ್ಮಿಣಿ ಭಾಮೆ
ನಡುವೆ ಭೀಮೇಶಕೃಷ್ಣ ನಗುತ ಕುಳಿತನಾಗ 3
***