Showing posts with label ವಿಜಯವಿಠಲರಾಯಾ ನಂಘ್ರಿಯುಗ ಭಜಿಸುವ jayesha vittala vijayadasa stutih. Show all posts
Showing posts with label ವಿಜಯವಿಠಲರಾಯಾ ನಂಘ್ರಿಯುಗ ಭಜಿಸುವ jayesha vittala vijayadasa stutih. Show all posts

Thursday, 5 August 2021

ವಿಜಯವಿಠಲರಾಯಾ ನಂಘ್ರಿಯುಗ ಭಜಿಸುವ ankita jayesha vittala vijayadasa stutih

 ..

ವಿಜಯವಿಠಲರಾಯಾ | ನಂಘ್ರಿಯುಗ ಭಜಿಸುವ

ವಿಜಯರಾಯನೆ ಜೀಯ

ರಜದೂರ ತವಪದ ಭಜಕ ನಾನೆನಿಸಯ್ಯ

ಋಜುರಾಜ ಪ್ರೀಯ

ಕುಜನ ಸಂಗದಿ ಬೆರೆದು ಮನಹರಿ

ಭಜನೆಗೊದಗದು ಎಷ್ಟು ಬೇಡಲು

ದ್ವಿಜವರೇಣ್ಯನೆ ಎಮ್ಮ ಬಾಂಧವ

ಸೃಜಿಸು ಶ್ರೀಧರನೊಲಿಮೆ ಶಕ್ತಿಯ 1


ದೀನಬಾಂಧವ ನೀನು | ಪಾವನ್ನ ತವ ಕುಲ

ಸೂನು ಎನಿಸಿದೆ ನಾನು

ಕುಲಸ್ವಾಮಿ ಕೃಷ್ಣನ ಧ್ಯಾನ ಪಾಲಿಸು ಇನ್ನು

ದಾನಿ ಸುರಧೇನು

e್ಞÁನ ಭಕ್ತಿ ಧ್ಯಾನಯೋಗದಿ

ವೇಣುಗೋಪಾಲನ್ನ ಹೃದಯ ಪ್ರ

ಧಾನ ನಾಡಿಯ ಮಧ್ಯ ಕುಣಿಸುವ

ತ್ರಾಣ ತರಿಸು ತೀವ್ರ ಮಹಿಮನೆ 2


ಲೋಕನಾಥನ ಪ್ರೇಮ | ಭೋಗಿಸುವ ಯೋಗಿಯೆ

ಸಾಕು ಸದ್ಗುಣಧಾಮ

ಬಾಗಿದಿನೊ ನಿನ್ನ ಅಂಘ್ರಿಗೆ | ಶೋಕ ಸಲ್ಲದೊ ನೇಮ

ಸ್ವೀಕರಿಸು ಎಮ್ಮ

ಏಕ ಭಕ್ತಿಯ ಭಾಗ್ಯ ಪಾಲಿಸು

ಶ್ರೀ ಕಳತ್ರನ ಸಂಗಮತ್ತನೆ ಅ-

ನೇಕ ಭಕ್ತಗ್ಹರಿಯ ತೋರಿದೆ

ನಾಕ ತರು ಕರುಣಾಳು ಗುರುವರ 3


ದಾಸ ವರ್ಗದ ದೊರೆಯೆ | ಲಜ್ಜೆಯಾಗುತಿದೆನ್ನ

ದೋಷರಾಶಿಗಳೊರಿಯೆ

ಹಸಗೆಟ್ಟು ಬಗೆ ಬಿನ್ನೈಸಲಾಗದೊ ಖರಿಯೆ

ಬ್ಯಾಸರದ ಪೊರಿಯೆ

ಕಾಸು ಬಾಳದ ಎನ್ನಕರಗಳ

ಶ್ರೀಶ ಪಿಡಿವನು ಲೇಸು ಕರುಣದಿ

ವಾಸುದೇವಗೆ ದಾಸ ಜನರೊಳು

ಸೂಸಿ ಸುರಿವುದು ಸ್ನೇಹ ಸಂತತ 4


ದಾತರೊಳು ಸರಿದಾರೊ | ಹರಿದಾಸವರ್ಯನೆ

ಆತುಮಪ್ರದ ತೋರೋ ನಿನ್ನಂಥ

ದಾತರ ನಾ ತಿಳಿಯ ದಯ ಬೀರೊ

ಆರ್ತಿಯನು ಹೀರೋ

ಖ್ಯಾತ ನಿನ್ನಯ ಮಾತು ಒಮ್ಮೆಗು

ಮಾತರಿಶ್ವನನಾಥ ಮೀರನು

ಆತುರದಿ ನಿನ್ನಂಘ್ರಿಗೆರಗುವೆ

ಭೂತ ಪಾಲಿಸು ಹರಿಯ ಒಲುಮೆಗೆ 5


ಸುರಭಿ ಸುರತರು ಚಿಂತಾಮಣಿಗಳಂದದಿ ಮಹ

ವರಗಳೀವ ಶ್ರೀಮಂತ

ಭಾರತೀಶನ ಶ್ರೀ ಚರಣ ಬಿಡದಿಹ ಸ್ವಾಂತ

ಪರಮ ನಿಶ್ಚಿಂತ

ಚರಣ ಕಮಲದಿ ಮೊರೆಯನಿಟ್ಟನ

ಕರದ ಶಿಶುಗಳಂತೆ ಪಾಲಿಸಿ

ಮರುತ ಮಂದಿರ ಜಯೇಶವಿಠಲನ

ಭರದಿ ತೋರಿದ ಕರುಣ ಸಾಗರ 6

***