Showing posts with label ಶ್ರೀರಘುವರತೇ ನಮೋ ನಮೋ raghurama vittala. Show all posts
Showing posts with label ಶ್ರೀರಘುವರತೇ ನಮೋ ನಮೋ raghurama vittala. Show all posts

Saturday, 6 March 2021

ಶ್ರೀರಘುವರತೇ ನಮೋ ನಮೋ ankita raghurama vittala

 ರಾಗ -  :  ತಾಳ -


ಶ್ರೀ ರಘುವರತೇ ನಮೋ ನಮೋ ll ಪ ll


ಆಶ್ರಿತ ಪರಿಪಾಲತೇ ನಮೋ ನಮೋ ll ಅ ಪ ll 


ಸರಿಸಿಜಭವಪಿತ ಸರಸಿಜಲೋಚನ

ಪರಮಪುರುಷ ಖಗಪತಿ ಗಮನ 

ಸುರಕಿನ್ನರ ಭೂಸುರನರವರನುತ

ಸೂರಿಜನಪ್ರಿಯತೇ ನಮೋ ನಮೋ ll ೧ ll


ಮದನಕೋಟಿ ಲಾವಣ್ಯ ಶರಣ್ಯ ನಾ

ರದ ವೀಣಾಗಾನ ವಿಲೋಲ

ಮುದತೀರ್ಥವರದ ಮುನಿಜನಪಾಲಕ

ಸದಮಲಾತ್ಮಕತೇ ನಮೋ ನಮೋ ll ೨ ll


ರಾಮಭೂವರ ವಿರಾದಾಂತಕಬಲ-

ರಾಮಾನುಜ ರಘುರಾಮವಿಭೋ 

ಸೋಮಸೂರ್ಯನಯನ ಶುಭ-

ತಮ ಶ್ರೀ ಗುರುರಾಮವಿಟ್ಠಲತೇ  ನಮೋ ll ೩ ll

***