..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ರಕ್ತಾಕ್ಷಿ ಸಂವತ್ಸರ ಸ್ತೋತ್ರ
ಶರಣು ಶರಣು ರಕ್ತಾಕ್ಷಿ ವರ್ಷದ ಸ್ವಾಮಿ ಶ್ರೀ ನರಸಿಂಹನೇ ಶರಣು ದುರ್ಗಾರಮಣ ಜಗಜ್ಜನ್ಮಾದಿ ಕಾರಣ ಪಾಹಿಮಾಂ ಪ
ಸರಸಿಜಾಸನ ಶಿವ ಶಕ್ರಾದಿ ಸುರಸುವಂದಿತ ಪಾದನೇ ಶ್ರೀ ರಮಾಯುತನಾಗಿ ನೀ ಸಂವತ್ಸರದ ನಾಯಕರೊಳು ಇರುತ ಪ್ರಜೆಗಳ ಯೋಗ ಕ್ಷೇಮವ ವಹಿಸಿ ಪೊರೆವಿ ದಯಾನಿದೇ 1
ರಾಜ ಸೋಮನು ಮಂತ್ರಿ ಭೃಗು ಸೇನಾಧಿಪತಿ ಬೃಹಸ್ಪತಿ ಪ್ರಜ್ವಲಿಪರ ವಿಸಸ್ಯ ನಾಯಕ ಶನಿಯು ಧಾನ್ಯ ಅಧಿಪನು ರಾಜರಾಜೇಶ್ವರನೆ ನಿನ್ನ ಆಜÉ್ಞಯಿಂದ ಚರಿಪರು 2
ಶರಣು ಭಕ್ತರ ಕಾಯ್ವ ಕರುಣಾ ವಾರಿ ವಿಧಿ ನೀ ಸರ್ವದಾ ತರಿದು ಪಾಪವ ಪುಣ್ಯ ಒದಗಿಸಿ ಭಕ್ತಿ ಜ್ಞಾನ ಆಯುಷ್ಯ ಆರೋಗ್ಯವಿತ್ತು ಕಾಯೋ ಅಜಪಿತ ಪ್ರಸನ್ನ ಶ್ರೀನಿವಾಸನೇ 3
***