Showing posts with label ನೋಡಿರೈ ಕಲ್ಪಭೂರುಹರೆನಿಪರ purandara vittala. Show all posts
Showing posts with label ನೋಡಿರೈ ಕಲ್ಪಭೂರುಹರೆನಿಪರ purandara vittala. Show all posts

Thursday, 5 December 2019

ನೋಡಿರೈ ಕಲ್ಪಭೂರುಹರೆನಿಪರ purandara vittala

ರಾಗ ಮಧ್ಯಮಾವತಿ ಅಟತಾಳ

ನೋಡಿರೈ ಕಲ್ಪಭೂರುಹರೆನಿಪರ ನೋಡಿರೈ
ನಾಡೊಳು ಹರಿದಾಸರು ನರರೆ ||ಪ||

ಹರಿಯ ಪಾದದ ನೀರು ಧರೆಯೆಲ್ಲ ಸಲಹಿತು
ಹರಿಯುಂಡ ಚರುವು ಪ್ರಸಾದವಾಯಿತು
ಹರಿದಾಸರುಗಳೆಂಬ ನಾಮಧಾರಿಗಳನ್ನು
ನರರೆನ್ನಬಹುದೆ ಸುರರಿಗಧಿಕರನ್ನು ||

ನೀರು ಕೂಡಿದ ಹಾಲು ನೀರೆನ್ನಬಹುದೆ
ನೀರೊಳ್ಪುಟ್ಟಿದ ಮುತ್ತು ನೀರಹುದೆ
ಆರಿದ ಭಾಂಡವು ಮೃತ್ತಿಕೆಯಹುದೆ , ನಮ್ಮ
ಶೌರಿಯ ಶರಣರ ನರರೆನ್ನಬಹುದೆ ||

ಪರಬ್ರಹ್ಮ ವಿಷ್ಣುವಿನ ಕರಪೂಜ್ಯ ವೈಷ್ಣವರ
ಪರಿಕಿಸಲರಿಯರು ಮತಿಭ್ರಷ್ಟರು
ಸಿರಿಗುರು ಪುರಂದರವಿಠಲನ ದಾಸರ
ನರರೆಂದ ನರರಿಗೆ ರೌರವನರಕ ||
***

pallavi

nODirai kalpa bhUruharenipara nODirai nADoLu shrI haridAsaru narare nODirai

caraNam 1

hariya pAdada nIru dhareyalla salahidu hariyuNDa caruvu prasAdavAyitu
haridAsarugaLemba nAmadhArigaLannu nararenna bahude surarigadhikarannu

caraNam 2

nIru kUDida hAlu nIrenna bahude nIroL puTTida muttu nIrahude
Arida bhANDavu mrttikeyahude namma shauriya sharaNara nararenna bahude

caraNam 3

para brahma viSNuvina karapUJya vaiSNavara parigisalariyaru mati braSTaru
shrI guru purandara viTTalana dAsaru nararenda nararige raurava naraka
***