by ಗುರುತಂದೆವರದಗೋಪಾಲ ವಿಠಲ
ರುದ್ರದೇವರು
ಕರುಣ ಬಾರದೇ ನಿನಗೆ ಅಕಟಕಟಪಾರ್ವತೀ ಧೊರೆಯೇ ಕಾಳಿಯ ಮರಿಯೇ ಪ
ತರುಳನಾ ತರುಳಿಯ ಭವದೊಳಗೆ ಬಲು ದಿವಸ ಬಹು ವ್ಯಾಧಿಯಲಿ ನೊಂದು ಬಾಯ್ತೆರದು ಮೊರೆಯಿಡುವುದಕಂಡು 1
ಆರು ಗತಿಯಿಲ್ಲೆಂದು ನಿನ್ನ ಸುಖ ಸಾರ ಚರಣಕ್ಕೆ ಬಿದ್ದಿಹನೆಂದು ಉದಾಸಿಸದೆ ಸಲಹೋ ಕರುಣೀ 2
ಏಸೇಸು ಜನುಮದೊಳು ದಾಸ ನಾನಿನಗಯ್ಯ ಈಶ ನೀನೆಂದು ಮರೆಪೊಕ್ಕೆ ಜೀಯ್ಯಾ 3
ಅಭಯ ನೀನಿತ್ತು ಭಯ ಪಾಲಿಸದಿರೆ ಗತಿ ಯಾರೋ ಎನಗೆ ಇಂದ್ರಾದ್ಯಮರ ಗಣಗಳಿಗೆ ದಾತನೆನಿಪ ಗುರು-ತಂದೆವರದಗೋಪಾಲವಿಠಲನ ದೂತಾ 4
***