Showing posts with label ಪೋಗದಿರೆಲೋ ರಂಗ ಬಾಗಿಲಿಂದಾಚೆಗೆ purandara vittala POGADIRELO RANGA BAAGILINDAACHEGE. Show all posts
Showing posts with label ಪೋಗದಿರೆಲೋ ರಂಗ ಬಾಗಿಲಿಂದಾಚೆಗೆ purandara vittala POGADIRELO RANGA BAAGILINDAACHEGE. Show all posts

Sunday, 5 December 2021

ಪೋಗದಿರೆಲೋ ರಂಗ ಬಾಗಿಲಿಂದಾಚೆಗೆ purandara vittala POGADIRELO RANGA BAAGILINDAACHEGE



ಪೋಗದಿರೆಲೋ ರಂಗ ಬಾಗಿಲಿಂದಾಚೆಗೆ
ಭಾಗವತರು ಕಂಡರೆತ್ತಿಕೊಂಡೊಯ್ವರೋ

ಸುರಮುನಿಗಳು ತಮ್ಮ ಹೃದಯಗಹ್ವರದಲ್ಲಿ
ಪರಮಾತ್ಮನ ಕಾಣದರಸುವರೋ
ದೊರಕದ ವಸ್ತು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರೋ

ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲಾ
ಹಗೆಯಾಗಿ ನುಡಿವರೋ ಗೋಪಾಲನೇ
ಮಗುಗಳ ಮಾಣಿಕ್ಯ ತಗಲಿತು ತಮಗೆಂದು
ಬೇಗದಿಂದಲಿ ಬಂದು ಬಿಗಿದಪ್ಪಿಕೊಂಬರೋ

ಧಿಟ್ಟ ನಾರಿಯರೆಲ್ಲಾ ತಮ್ಮಿಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ಹತ್ತಿ ತಿರುಗುವರೋ
ಶೃಷ್ಟೀಶ ಪುರಂದರವಿಠ್ಠಲರಾಯನೇ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೋ ರಂಗಯ್ಯ
*****

ರಾಗ ಶಂಕರಾಭರಣ ಅಟ ತಾಳ (raga tala may differ in audio)

Hogadiralo Ranga Bagilindacege |
Bagavataru Kandu Etti Kondoyvaru ||

Suramunigalu Tamma Hrudaya Kamala Dalli
Paramatmana Kanade Arasuvaru
Dorakada Vastuvu Dorakitu Tamagendu
Harushadindali Ninna Karedetii Kombaru ||1||


Aganitaguna Ninna Jagada Nariyarella
Hageyagi Nudivaro Gopalane
Magugala Manikya Tagulitu Karakendu
Vegadindali Bandu Bigidappikombuvaru ||2||

Ditta Nariyarella Istava Salisendu
Attatti Bennat/Pti Tiruguvaro
Srshtisha Purandara Vittala Rayane
Istishtu Benneya Kotteno Rangayya ||3||
***

pallavi

pOgadirao ranga bAgilindAceke

anupallavi

bhAgavataru kaNDaretti koNDoivaro

caraNam 1

sura munigaLu tamma hrdayagahvaradalli paramAtmana kANadarasuvaro
dorakada vastuvindu dorakidu tamagendu haruSadindali ninna karadetti kombaru

caraNam 2

agaNita guNa ninna jagada nAriyarella hageyAgi nuDivaro gOpAlane
magugaLa mANikya tagalidu karagendu bEgadindali bandu bigidappi kombaro

caraNam 3

diTTa nAriyarella iSTava salisendu aTTaTTi benhinde tiruguvaro
shrSTIsha purandara viTTalarAyane iSTiSTu beNNeya koTTEnO rangayya.
***

ಪೋಗದಿರೆಲೋ ರಂಗ ಬಾಗಿಲಿಂದಾಚೆಗೆ
ಭಾಗವತರು ಕಂಡರೆ ಎತ್ತಿಕೊಂಡೊಯ್ವರೋ
ಸುರ ಮುನಿಗಳು ತಮ್ಮ ಹೃದಯ ಕಮಲದಲ್ಲಿ
ಪರಮಾತ್ಮನ ಕಾಣದೆ ಅರಸುವರೊ
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರದೆತ್ತಿಕೊಂಬರು
ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ 
ಹಗೆಯಾಗಿ ನುಡಿವರೊ ಗೋಪಾಲನೆ
ಮಗುಗಳ ಮಾಣಿಕ್ಯ ತಗಲಿತು ಕರಕೆಂದು
ಬೇಗದಿಂದಲಿ ಬಂದು ಬಿಗಿದಪ್ಪಿಕೊಂಬರೊ
ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು 
ಅಟ್ಟಟ್ಟಿ ಬೆನ್ನಟ್ಟಿ ತಿರುಗುವರೊ
ಸೃಷ್ಟೀಶ ಪುರಂದರ ವಿಟ್ಠಲರಾಯನೆ 
ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೋ ರಂಗಯ್ಯ


**********