ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಸುಕಾಲ ಸುಪರ್ವಕಾಲ P
ಇಂದು ಸುಕಾಲ ಇಂದು ಸುಕಾಲ ಸುಪರ್ವಕಾಲ 1
ಇಂದು ಸುಕಾಲ ಬಂದ ಗೋಪಾಲ ಸಂಧಿಸಿ ಮನದೊಳಗಾದನುಕೂಲ 2
ಇಂದು ಸುದಿನ ಚಂದವಾಯಿತು ಎನ್ನಮನ ಉನ್ಮನ3
ಭಿಕ್ಷೆ ನೋಡುವ ಲಕ್ಷ ಒಡಿಯ ಪೂರಿಸಿದ ಬೇಡುವಪೇಕ್ಷ4
ಇಂದು ಆನಂದ ಹೊಂದಿ ಮಹಿಪತಿಗುರುಪಾದಾರವಿಂದ 5
***