Showing posts with label ಕಂಗಳಿಗೆ ಹಬ್ಬವಾಯಿತಯ್ಯ shree krishna purandara dasa stutih. Show all posts
Showing posts with label ಕಂಗಳಿಗೆ ಹಬ್ಬವಾಯಿತಯ್ಯ shree krishna purandara dasa stutih. Show all posts

Friday, 27 December 2019

ಕಂಗಳಿಗೆ ಹಬ್ಬವಾಯಿತಯ್ಯ ankita shree krishna purandara dasa stutih

ಕಂಗಳಿಗೆ ಹಬ್ಬವಾಯಿತಯ್ಯಾ..
ಮಂಗಳಾತ್ಮಕ ಪುರಂದರ ದಾಸರನು ಕಂಡು...||

ಸಕಲ ತೀರ್ಥ ಯಾತ್ರೆ ಮಾಡಿದ ಫಲವು
ಸಕಲ ಸತ್ಕರ್ಮ ಸಾಧಿಸಿದ ಫಲವು
ಭಕುತಿಯಿಂ ಭಾಗಿರಥಿ ಮಜ್ಜನದ ಫಲವು
ರುಕುಮಿಣಿ ಪತಿಯ ಪದಭಜಕರನ್ನು ಕಂಡು...|| ೧ ||

ಇವನ ನರನೆಂದವರು ನರಕದಲಿ ಬೀಳುವರು
ಕವಿಜನರು ಒಪ್ಪಿ ಕೈ ಹೊಡೆದು ಹೇಳಿದರು
ಅವನಿಯೊಳು ಅತಿ ದುರ್ಲಭಾವು ನಂದಗೋಪನ
ಕುವರನಿದ್ದೆಡೆ ವೈಕುಂಠ ವೆಂಬುವರ ಕಂಡು..... || ೨ ||

ಧನ್ಯನಾದೆನು ನಾನೂ ಮನುಜ ಜನ್ಮದಿ ಪುಟ್ಟಿ
ಮಾನ್ಯನಾದೆನು ಇನ್ನು ಈ ಜಗದೊಳಗೆ
ಪನ್ನಂಗ ಶಯನ ಶ್ರೀ ಕೃಷ್ಣನ ದಾಸರನು
ಚೆನ್ನಾಗಿ ಸ್ಮರಿಸಿ ಪಾವನನಾದೆನಿಂದು.... || ೩ ||
*********

ಕಂಗಳಿಗೆ ಹಬ್ಬವಾಯಿತಯ್ಯಮಂಗಳಾತ್ಮಕ ಪುರಂದರದಾಸರನು ಕಂಡು ||pa||

ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವುಸಕಲ
ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗೀರಥೀ ಮಜ್ಜನದ
ಫಲವುರುಕುಮಿಣಿ ಪತಿಯ ಪದ ಭಕುತರನು ಕಂಡು ||1||

ಇವರ ನರರೆಂದವರು ನರಕದಲಿ ಬೀಳುವರುಕವಿಜನರು
ಒಪ್ಪಿ ಕೈಹೊಡೆದು ಹೇಳಿರಲುಅವನಿಯೊಳಗತಿ ದುರ್ಲಭವು
ನಂದಗೋಪನ್ನಕುವರನಿದ್ದೆಡೆಯ ವೈಕುಂಠವೆಂಬುವರ ಕಂಡು |2||

ಧನ್ಯನಾದೆನು ನಾನು ಮನುಜನ್ಮದಿ ಪುಟ್ಟಿಮಾನ್ಯನಾದೆನು
ಇನ್ನು ಈ ಜಗದೊಳಗೆಪನ್ನಂಗಶಯನ ಶ್ರೀಕೃಷ್ಣನ
ದಾಸರನುಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು ||3||
********