Showing posts with label ನೀನೇನೋ ನಿನ್ನ ಲಕ್ಷೇನೋ ದಾನಿ ನಿನ್ನಯ ಪಾದಧ್ಯಾನಿಗಳಿರಲಿನ್ನು gurujagannatha vittala. Show all posts
Showing posts with label ನೀನೇನೋ ನಿನ್ನ ಲಕ್ಷೇನೋ ದಾನಿ ನಿನ್ನಯ ಪಾದಧ್ಯಾನಿಗಳಿರಲಿನ್ನು gurujagannatha vittala. Show all posts

Wednesday, 1 September 2021

ನೀನೇನೋ ನಿನ್ನ ಲಕ್ಷೇನೋ ದಾನಿ ನಿನ್ನಯ ಪಾದಧ್ಯಾನಿಗಳಿರಲಿನ್ನು ankita gurujagannatha vittala

 ..

ನೀನೇನೋ ನಿನ್ನ ಲಕ್ಷೇನೋ

ದಾನಿ ನಿನ್ನಯ ಪಾದಧ್ಯಾನಿಗಳಿರಲಿನ್ನು ಪ


ಹರಿ ನೀನು ಮುನಿದರೆ ಗುರು ಎನ್ನ ಕಾಯಿವೋನು

ಗುರು ತಾನೆ ಮುನಿದರೆ ಹರಿ ನೀನು ಕಾಯಿದೀಯಾ 1

ಗುರು ದೊರೆತರೆ ಇನ್ನು ಹರಿ ನೀನು ದೊರೆತೀಯ

ಗುರುವು ದೊರೆಯದಿರೆ ಹÀರಿ ನೀನು ದೊರೆಯೆಯಯ್ಯ 2


ಗುರು ತಾನು ಕರುಣಿಸೆ ಹರಿ ನೀನು ಕರುಣಿಪಿ

ಗುರು ಬಿಡಲು ಅವನ ಹರಿ ನೀನು ಬಿಡುವಿಯೊ 3


ಗುರು ತಾನು ಗತಿಕೊಡೆ ಹರಿ ನೀನು ಗತಿಕೊಡವಿ

ಗುರು ಇಲ್ಲzವÀನಿಗೆ ಹರಿ ನೀನೂ ಇಲ್ಲವಯ್ಯಾ 4


ಸುಗುಣಪೂರ್ಣ ಗುರುಜಗನ್ನಾಥ ವಿಠಲಾ

ಜಗಕೆ ಮುಖ್ಯ ಗುರು ನಿಗಮ ಪೇಳಿದಮೇಲೆ 5

***