ಭಜಿಸಿರೋ ಮನದಣಿಯ ಸುಜನಾಬ್ಜ ದಿನಮಣಿಯ
ಭುಜಗಾರಿಗಮನ ತಿಂಥಿಣಿಯ ಸತ್ಕಣಿಯ ಪ
ರಜನೀಕರ ಗುಣಶ್ರೇಣಿ ಅಜಭವ ಸುರಾಗ್ರಣಿಯ
ತ್ರಿಜಗಮೋಹನ ಮಣಿಯ ಸೊಬಗಿನ ಕಣಿಯ ಅ.ಪ
ಪೊಳೆವ ಮಕುಟದ ಫಣಿಯ ತಿಲಕದಲಿ ರಂಜಿಸುವ
ಪ್ರಣವ ಗೋಚರ ಸುಧಾಮಯದ ಕದಪಿನಲಿ
ತೊಳಪ ಕುಂಡಲದ ನಾಸಿಕದ ಮೂಗುತಿಯೆಸೆಯೆ
ಸುಲಿಪಲ್ಲ ನಗೆಮೊಗದ ಸುಲಭಸೌಂದರÀನ 1
ಪದಕ ಮಣಿಮಯ ಮೌಕ್ತಿಕದ ಹಾರ ತ್ರಿಸರ ಕಂ
ಧರ ವೈಜಯಂತಿಯೊಲವಿನ ಬಾವುಲಿ
ಮುದದ ಕಂಕಣ ಕರದ ಮುದ್ರೆಯೆಸೆವಾ ಬೆರಳ
ಗದೆ ಸುದರ್ಶನ ಕಂಬು ಮದನಶರಧನು 2
ಉರದ ಪೊಂಬಣ್ಣದಂಬರ ತರಣಿ ಶತಕೋಟಿ
ಕಿರಣತತಿ ಕುಮುದ ವರ್ಣದ ತನುರುಚಿಯಾ
ಹರಸುರೇಶ್ವರ ವಿರಿಂಚ್ಯಾದಿ ವಂದಿತಚರಣ
ಸರಸಿರುಹ ವರದೇವಪುರದ ಸಿರಿವರನ 3
****