by gopalaryaru
ತಾನೆ ಬಂದ ಎನ್ನ ಮನಕೆ ಗೋಪಾಲಾರ್ಯಏನು ಸೇವೆ ಮಾಡಲಾತಗೆ ಪ
ಬರುತಲೊಂದು ಮುಕುತಿಮಾರ್ಗವ ಶಾಸ್ತ್ರೀಯವಾದಪರಿ ಪರಿ ಸಾಧನವರ್ಗವಾ ಅರಿಷಡ್ವರ್ಗವೆಂಬ ದುರ್ಗವಾ ತನ್ನಯ ದಿವ್ಯಕರುಣಾರಸವೆಂಬ ಸ್ವರ್ಗವಾ ಕರೆದಿತ್ತಾ ಪರಿವುತ್ತಾ ಪರವುತ್ತಾ ಅರಿಸುತ್ತಾ 1
ಕಾಳಗತ್ತಲೆಯ ಯೂಥವಾ ಮನದೊಳಿದ್ದಕೀಳು ಬುದ್ಧಿಯಪರಾಧವಾಮೂಳ ವಾಸನೆಯ ಮುಖವಾ ವೇದಾಂತ ಸಂಮೇಳದಿಂದ ಬಹ ಸುಖವಾಪೇಳುತ್ತಾ ಸೀಳುತ್ತಾ ತಾಳುತ್ತಾ ಕೀಳುತ್ತಾ 2
ಸಾರ ಸತ್ಸಂಗದ ದಾರಿಯಾ ಮುಂದುಗಾಣಿಸದಕ್ರೂರ ಕರ್ಮಂಗಳ ಪರಿಯಾ ಘೋರ ಮಾಯೆಯೆಂಬ ತೊರೆಯಾ ಗೋಪಾಲಾರ್ಯಸಾರಾನಂದವೆಂಬ ಪುರಿಯಾತೋರಿಸುತಾ ಹೀರಿಸುತಾ ಹಾರಿಸುತಾ ಸೇರಿಸುತಾ 3
***