Showing posts with label ನಿನ್ನೊರೆಗೆ ನಾ ತಿಳಿಯಲಾರೆ ಪನ್ನಗಾದ್ರಿವಾಸ ಶ್ರೀಹರೆ gadugina veeranarayana. Show all posts
Showing posts with label ನಿನ್ನೊರೆಗೆ ನಾ ತಿಳಿಯಲಾರೆ ಪನ್ನಗಾದ್ರಿವಾಸ ಶ್ರೀಹರೆ gadugina veeranarayana. Show all posts

Wednesday, 1 September 2021

ನಿನ್ನೊರೆಗೆ ನಾ ತಿಳಿಯಲಾರೆ ಪನ್ನಗಾದ್ರಿವಾಸ ಶ್ರೀಹರೆ ankita gadugina veeranarayana

 ..

kruti by ವೀರನಾರಾಯಣ Veeranarayana 


ನಿನ್ನೊರೆಗೆ ನಾ ತಿಳಿಯಲಾರೆ ಪ


ಪನ್ನಗಾದ್ರಿವಾಸ ಶ್ರೀಹರೆ ಅ.ಪ.


ಕುನ್ನಿ ಮಾನವ ನಾನು ಎನ್ನಿಂದ ಸಾಧ್ಯವಿರೆಇನ್ನೂ ಹೆಚ್ಚು ಹೆಚ್ಚು ಭಕುತಿಯನ್ನು ಬೇಡ ಬೇಡ 1


ಬೊಮ್ಮಾದಿ ದೇವತೆಗಳು ಅಮ್ಮ ಲಕುಮಿಯ ಸಹನಿಮ್ಮನ್ನು ತಿಳಿಯರಿನ್ನು ತಿಳಿವ ಹಮ್ಮು ನನಗೇಕೆ ಶೌರೇ 2


ಅನ್ಯಜೀವಿಯಂತರಂಗ ಎಂದೂ ತಿಳಿಯಲಾರೆ ನಾನುಇನ್ನು ಸರಸಿಜಾಮನೊಡಲ ನಿನ್ನ ತಿಳಿವುದೆಂತಹನೇ 3


ಇಷ್ಟೇ ಭಕುತಿಯಿಂದ ನೀನು ತುಷ್ಟನಾಗಿ ಸಲಹಬೇಕುಎಷ್ಟು ಕಷ್ಟಪಟ್ಟರೂ ನಿನ್ನಿಷ್ಟಕೆ ಸರಿ ಹೋಗುವದೆಷ್ಟು 4


ಭಕುತಿಯಲ್ಲಿ ಸತತವಿರಲು ಶಕುತಿಯನ್ನುನ್ನೀಯೊ ಎನಗೆಸಕಲ ಜಗದಿ ಮೆರೆವ ಗದುಗು ವೀರನಾರಾಯಣ5

***