..
kruti by ಭೀಮಾಶಂಕರರು ದಾಸರು bheemashankara
ಮಾಡೋ ಪರಮೇಶ್ವರ ಗುರುಧ್ಯಾನಾ ಬಿಡದಿರುವದು ಭಜನಾ ||ನೋಡೋ ನಿನ್ನೊಳು ನಿಜ ಖೂನಾ | ಪೂರ್ಣೈಕ್ಯದ ಜ್ಞಾನಾ ಪ
ಅಪರೂಪದ ನಿಜ ತನುವಿದು ನೋಡೋ ಸೆಡಗರದೀ ಪಾಡೋ ||ಅಪಹಾಸ್ಯವ ಮಾಡದೆ ನೀ ಕೂಡೋ ಘನ ಚಿನ್ಮಯ ಗೂಡೋ 1
ಆಜ್ಞಾ ಚಕ್ರದ ಬಳಿಯಲ್ಲೀ | ಎರಡೂ ಕಮಲದಲ್ಲೀ |ಪ್ರಾಜ್ಞಾ ಝಗ ಝಗಿಸುವ ಬೆಳಕಲ್ಲೀ | ತಿಳಿ ನಿನ್ನೊಳಗಿಲ್ಲೀ 2
ಮೇಲಿನ ಸ್ಥಾನದ ಸಹಸ್ರಾರ | ಗುರುತತ್ತ್ವದ ಸಾರಾ ||ಪೇಳಲಳವಲ್ಲವು ಸುಖ ಪೂರಾ | ಶಂಕರ ಪದವಿವರಾ | ಭೀಮಾ ಶಂಕರ ಪದವಿವರಾ 3
***