Showing posts with label ಸಾರಿರೈಯ್ಯಾ ಜನರು ಗಂಭೀರ ಗುಣನಿಧಿ ಮುಖ್ಯ ಪ್ರಾಣನ gurumahipati. Show all posts
Showing posts with label ಸಾರಿರೈಯ್ಯಾ ಜನರು ಗಂಭೀರ ಗುಣನಿಧಿ ಮುಖ್ಯ ಪ್ರಾಣನ gurumahipati. Show all posts

Wednesday, 1 September 2021

ಸಾರಿರೈಯ್ಯಾ ಜನರು ಗಂಭೀರ ಗುಣನಿಧಿ ಮುಖ್ಯ ಪ್ರಾಣನ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸಾರಿರೈಯ್ಯಾ ಜನರು ಗಂಭೀರ ಗುಣನಿಧಿ ಮುಖ್ಯ ಪ್ರಾಣನ ಪ 

ರೋಷದಿಲಂಕೆಯವಳಿಸಿ ವಿಭೀಷಣ ನಾಮವೇ ಉಳಿಸಿ || ಔಷಧಗಿರಿ ತಂದಿಳಿಸಿ ಕಾಯದಾ ಸೌಮಿತ್ರಿಯ ಪ್ರಾಣವೆನುಳಿಸಿ1 

ಅರಗಿನ ಮನೆಯಿಂದಾ ಐವರನು ಹೊರಡಿಸಿ ತಂದಾ | ಪುರ ಬೋಧನಕ ಬಂದಾ | ಸುರರಾ ಕಾಯದಾ ಕರುಣ ದಿಂದಾ 2 

ಹರಿಪರಂ ದೈವೆಂದರಸೀ | ದುರುಳರ ಮತವನು ಪರಿಹರಿಸಿ | ಹೊರೆದನು ಜಗ ಉದ್ಧರಿಸೀ ಎಂ | ದೆರಗಿದ ಮಹಿಪತಿ ನಂದನುದ್ಧರಿಸೀ 3

***