Showing posts with label ದೇವ ಋಷಿಗಳ ನೋಡಿದೆ ಹರಿಪಾದ ಸೇವಕರ ಕೊಂಡಾಡಿದೆ bheemesha krishna. Show all posts
Showing posts with label ದೇವ ಋಷಿಗಳ ನೋಡಿದೆ ಹರಿಪಾದ ಸೇವಕರ ಕೊಂಡಾಡಿದೆ bheemesha krishna. Show all posts

Wednesday, 1 September 2021

ದೇವ ಋಷಿಗಳ ನೋಡಿದೆ ಹರಿಪಾದ ಸೇವಕರ ಕೊಂಡಾಡಿದೆ ankita bheemesha krishna

 ..

ದೇವಋಷಿಗಳ ನೋಡಿದೆ ಹರಿಪಾದ

ಸೇವಕರ ಕೊಂಡಾಡಿದೆ

ದೇವಋಷಿ ಹರಿಪಾದ ಸೇವಕರು ನಮ್ಮಾ ್ವಸು-

ದೇವಸುತನಂಕದಲ್ಲುದಿಸಿದುತ್ತಮರಿವರು ಪ


ವಾಣಿಪತಿಪಿತನ ಚರಣಾಂಬುಜ ಸೇವೆ

ಮಾಡೋ ಜನರಲ್ಲೆ ಕರುಣ

ಜಾಣ ನಾರಂದ ಜಗದೀಶನ ಗುಣಮಹಿಮೆ

ವೀಣಾಪಾಣಿಗಳಿಂದ ಸ್ತುತಿಸಿ ಕೊಂಡಾಡುವರು 1


ಪ್ರೀತಿಯಿಂದ್ಹರಿಯ ನೋಡಿ ಸುರಪಾರಿ-

ಜಾತವನು ತಂದು ನೀಡಿ

ಮಾತುಳಾಂತಕನ ಮಡದಿ(ಯ)ರಿಗೆ ಕಲಹವನ್ಹೂಡಿ

ಭೂತಳಕೆ ಸುರತರುವ ತರಿಸಿದರ್ಹರಿಕರಗಳಿಂದ2


ದಾಸಿಯಲ್ಲುದಿಸಿ ವಿಷಯಗಳು-

ದಾಶ(ಸೀ?)ನವ ಮಾಡಿ ಬ್ಯಾಗ

ಅಸುರಾಂತಕನ ಅತಿಭಕ್ತಿಯಿಂದಲಿ ಭಜಿಸಿ ಭೀ-

ಮೇಶಕೃಷ್ಣನ ಗುಣವ ಪಾಡಿ ಕೊಂಡಾಡುವರು3

***