ರಾಗ ಕಾಂಭೋಜ ಝಂಪೆತಾಳ
ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ
ಇಂದ್ರಾದಿ ಲೋಕವೆಲ್ಲವು ಕಾಲ ಕಂಡ್ಯ
ಎಂದಿನಂತಲ್ಲ ಈ ದೇಹ ಕಳೆ ಕಂಡ್ಯ
ಹಿಂದು ಮುಂದಣ ಗತಿಯ ಅರಿತಿಹುದು ಕಂಡ್ಯ ||
ಎಳೆತುಳಸಿ ವನಮಾಲೆ ಧರಿಸಿಕೊಳಬೇಕು
ಘಳಿಲನೇ ಹರಿಯ ಪೂಜಿಸುತಿರಲುಬೇಕು
ಕಳಕಳನೆ ಏಕಮನ ಕರಗುತಿರಬೇಕು
ನಳಿನನಾಭನ ಪಾದ ಪೊಗಳುತಿರಬೇಕು ||
ಹರಿಕೃಷ್ಣ ಶರಣೆನ್ನು ಅದು ನಿಮಗೆ ಲೇಸು
ಹರಿಕಥಾಮೃತವನ್ನೆ ಜಗದೊಳಗೆ ಸೂಸು
ಹರಿಭಕ್ತಿಯಿಲ್ಲದವರ ಸಂಗಕ್ಕೆ ಹೇಸು
ಹರಿಯ ಮರೆತರೆ ಮುಂದೆ ನರಕದೊಳಗ್ಹಾಸು ||
ದುರ್ಜನರ ಮನೆಯೊಳಿಹ ಹಾಲ ಸವಿಗಿಂತ
ಸಜ್ಜನರ ಮನೆಯೊಳಿಹ ನೀರು ಲೇಸೆಂದ
ದುರ್ಜನರ ಸಂಗದೆಡೆ ಕೂಡಿಯಾಟದಕಿಂತ
ಸಜ್ಜನರ ಕೂಡೆ ಕಾದಾಡುವುದೇ ಲೇಸೆಂದ ||
ಹರಿಯನೇ ಅನವರತ ನೆನೆಯುತಿರಬೇಕು
ಕರಗಳಲಿ ಹರಿಯ ಪೂಜಿಸುತಿರಲುಬೇಕು
ಚರಣಂಗಳಲಿ ಪುಣ್ಯಸ್ಥಳವ ಮೆಟ್ಟಲು ಬೇಕು
ಪುರಂದರವಿಠಲನ್ನ ನೆನೆಯುತಿರಬೇಕು ||
***
ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ
ಇಂದ್ರಾದಿ ಲೋಕವೆಲ್ಲವು ಕಾಲ ಕಂಡ್ಯ
ಎಂದಿನಂತಲ್ಲ ಈ ದೇಹ ಕಳೆ ಕಂಡ್ಯ
ಹಿಂದು ಮುಂದಣ ಗತಿಯ ಅರಿತಿಹುದು ಕಂಡ್ಯ ||
ಎಳೆತುಳಸಿ ವನಮಾಲೆ ಧರಿಸಿಕೊಳಬೇಕು
ಘಳಿಲನೇ ಹರಿಯ ಪೂಜಿಸುತಿರಲುಬೇಕು
ಕಳಕಳನೆ ಏಕಮನ ಕರಗುತಿರಬೇಕು
ನಳಿನನಾಭನ ಪಾದ ಪೊಗಳುತಿರಬೇಕು ||
ಹರಿಕೃಷ್ಣ ಶರಣೆನ್ನು ಅದು ನಿಮಗೆ ಲೇಸು
ಹರಿಕಥಾಮೃತವನ್ನೆ ಜಗದೊಳಗೆ ಸೂಸು
ಹರಿಭಕ್ತಿಯಿಲ್ಲದವರ ಸಂಗಕ್ಕೆ ಹೇಸು
ಹರಿಯ ಮರೆತರೆ ಮುಂದೆ ನರಕದೊಳಗ್ಹಾಸು ||
ದುರ್ಜನರ ಮನೆಯೊಳಿಹ ಹಾಲ ಸವಿಗಿಂತ
ಸಜ್ಜನರ ಮನೆಯೊಳಿಹ ನೀರು ಲೇಸೆಂದ
ದುರ್ಜನರ ಸಂಗದೆಡೆ ಕೂಡಿಯಾಟದಕಿಂತ
ಸಜ್ಜನರ ಕೂಡೆ ಕಾದಾಡುವುದೇ ಲೇಸೆಂದ ||
ಹರಿಯನೇ ಅನವರತ ನೆನೆಯುತಿರಬೇಕು
ಕರಗಳಲಿ ಹರಿಯ ಪೂಜಿಸುತಿರಲುಬೇಕು
ಚರಣಂಗಳಲಿ ಪುಣ್ಯಸ್ಥಳವ ಮೆಟ್ಟಲು ಬೇಕು
ಪುರಂದರವಿಠಲನ್ನ ನೆನೆಯುತಿರಬೇಕು ||
***
pallavi
indriyangaLa. rAgA: kAmbhOji. jhampe tALA.
1: indriyangaLa sukhava neccadiru kaNDya indrAdi lOkavellavu kAla kaNDya
endinantalla I dEha kaLe kaNDya hindumundaNa gatiya aritihudu kaNDya
caraNam 2
eLetuLasi vnamAle dharisi koLa bEku ghaLilane hariya pUjisutiralu bEku
kaLakaLane Eka mana karagutira bEku naLina nAbhana pADa pogaLutira bEku
caraNam 3
hari krSNa sharaNennu adu nimage lEsu harikathAmrtavanne jagadoLage sUsu
hari bhaktiyilladavara sangakke hEsu hariya maretare munde narakadoLaghAsu
caraNam 4
durjanara maneyoLiha hAla saviginta sajjanara maneyoLiha nIru lEsenda
durjanara sangadeDe kUDiyATadaginta sajjanara kUDe kAdADuvude lEsenda
caraNam 5
hariyane anavarata neneyutira bEku karagaLisi hariya pUjisutiralu bEku
caraNangaLali puNya sthaLava meTTalu bEku purandara viTTalanna neneyutira bEku
***