Showing posts with label ಸುಜ್ಞಾನ ಸಮುದ್ರ ಮಧ್ವಮುನಿರಾಯ ನಿವಾರಿಸಿದ ಮಧ್ವ ಮುನಿ vijaya vittala madhwacharya stutih. Show all posts
Showing posts with label ಸುಜ್ಞಾನ ಸಮುದ್ರ ಮಧ್ವಮುನಿರಾಯ ನಿವಾರಿಸಿದ ಮಧ್ವ ಮುನಿ vijaya vittala madhwacharya stutih. Show all posts

Friday, 27 December 2019

ಸುಜ್ಞಾನ ಸಮುದ್ರ ಮಧ್ವಮುನಿರಾಯ ನಿವಾರಿಸಿದ ಮಧ್ವ ಮುನಿ ankita vijaya vittala madhwacharya stutih

ವಿಜಯದಾಸ
ಸುಜ್ಞಾನ ಸಮುದ್ರ ಮಧ್ವಮುನಿರಾಯ ||
ನಿವಾರಿಸಿದ | ಮಧ್ವ ಮುನಿರಾಯಾ ಪ
ಸಂಕರನಾದಾ | ಮಧ್ವರಾಯಾ ||
ಗುಣಗಳಲ್ಲ ಕೆಡಿಸಿದಾ | ಮಧ್ವರಾಯಾ 1

ಹರಿಯಿಲ್ಲ ಗುರುವಿಲ್ಲ ಹರನು ಪುಸಿ ಎಂದು || ಮಧ್ವ | ಅವ |
ಪರದೈವ ತಾನೆ ಎಂದು ಧರೆಯೊಳು ತಿರುಗಿದ | ಮಧ್ವ 2

ಮಿಥ್ಯ ಅಹಂ ಬ್ರಹ್ಮ ಜಗಕೆಂದ | ಮಧ್ವ || ಅವ |
ಸತಿ ಒಂದೆ ಎಂದು ಮಧ್ವ 3

ಜಾತಿಧರ್ಮವೆಲ್ಲ ತೊರೆದು | ಜಾತಿ ಸಂಕರವಾಗೆ ಮಧ್ವ ||
ಮಿಥ್ಯ ಪಾತಕವೆ ತುಂಬಿತು | ಮಧ್ವರಾಯ 4

ಪೇಳಲು | ಮಧ್ವ ||ಬೊಮ್ಮ |
ಪರಿಹರ ಕಾಣದೆ ಹರಿಗೆ ಬಿನ್ನೈಸಿದ | ಮಧ್ವ5

ಜಯ ತನಯನ್ನ ಕರೆದು | ದಯದಿಂದ
ಪೇಳಲು | ಮಧ್ವ || ವೇಗ |
ಪ್ರಿಯದಲ್ಲಿ ಬಂದು ಮಧ್ಯಗೇಹನಲ್ಲಿ ಅವತರಿಸಿದ | ಮಧ್ವ 6

ಮುಖ್ಯ ಶಿಷ್ಯ ತಿಪ್ಪಣ್ಣ ಅವಧಾನಿ ಸೋತು ವೈಷ್ಣವನಾಗೆ | ಮಧ್ವ ||
ಸಂಕರ ಮೂಲಿಯ ಪೊಕ್ಕ | ಮಧ್ವ 7

ಶುಂಠ ಮಿಕ್ಕ ರಕ್ಕಸರ ಗಂಟಲ ಮುರಿದುವಟ್ಟಿ | ಮಧ್ವ ||
ಉಂಟು ಮಾಡಿದನು ವೈಕುಂಠ ಪತಿದೇವವೆಂದು | ಮಧ್ವ8

ಮರುತ ಮತ ಉಧ್ಧರಿಸಿ | ಗುರುಕುಲ ತಿಲಕನಾದ | ಮಧ್ವ ||ಶಿರಿ ವಿಜಯವಿಠ್ಠಲನ್ನ ಚರಣಾಬ್ಜ ಭೃಂಗನಾದ ಮಧ್ವ 9
********