ಜಗನ್ನಾಥದಾಸರು
ಬಾ ವೆಂಕಟಶೈಲಾಧಿಪ ಮನ್ಮನಕೆ ತಡಮಾಡುವುದ್ಯಾಕೆ
ಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆ ನಮಿಸುವೆ ಪ್ರತಿ ಕ್ಷಣಕೆ ಪ
ನೀ ಒಲಿದೆನ್ನ ದಯಾವಲೋಕನದಿ
ಪಾವನಮಾಡಲು ದೇವವರೇಣ್ಯ ಅ.ಪ.
ವೈಕುಂಠಾಧೀಶ ವಿಗತಕ್ಲೇಶ
ಚಿತ್ಸುಖಮಯವಪುಷ
ಭವ ಮದನ ದಿ
ವಾಕರ ಪ್ರಮುಖ ದಿವೌಕಸ ವರದ 1
ಮಮಸಮಾಸ್ವಾಮಿ ಮದಂತರ್ಯಾಮಿ ಸರ್ವಾಂತರ್ಯಾಮಿ
ಅಮಿತಾತ್ಮ ಅತಿರೋಹಿತ ನಿಷ್ಕಾಮಿ ಸೇವಿತ ಶ್ರೀಭೂಮಿ
ಅಮಿತ ಸುಗುಣಪೂರ್ಣ
ಅಮಲಮಹಿಮ ಖಳದಮನ ದಯಾಳೊ 2
ನಾಮಾಭಿಧೇಯ ಲೋಕಾಧ್ಯಕ್ಷಾ ಕಮಲಾಯತಾಕ್ಷ
ಸೋಮ ಭೂಮ ನಿಸ್ಸೀಮ ಮಹಿಮ ತ್ರಿ
ಧಾಮರಾಮ ಘನಶ್ಯಾಮ ಲಲಾಮ 3
ಪವನಂತರಾತ್ಮಾ ನಿರ್ಮಲಾತ್ಮಾ ಪರಮಾತ್ಮ e್ಞÁನಾತ್ಮಾ
ಅವಿಕಾರ ಅತಿರೋಹಿತ ಭೂತಾತ್ಮ ಪೂತಾತ್ಮ ಮಹಿತಾತ್ಮ
ತ್ರಿವಿಧ ಜೀವರಿಗೆ ವಿವಿಧ ಫಲಂಗಳ
ತವಕದಿ ಕೊಟ್ಟವರವರ ಪಾಲಿಸೋ 4
ಸೃಷ್ಟ್ಯಾದಿಕರ್ತ ತ್ರಿಜಗದ್ಭರ್ತ ಲೋಕೈಕ ಸಮರ್ಥ
ವೃಷ್ಣೀಶಾ ವೃಂದಾರಕ ರಿಪುಹರ್ತಾ ಮುಕ್ತರ ಪುರುಷಾರ್ಥ
ಪರಮೇಷ್ಟಿ ಜನಕ ಶಿ
ಷ್ಟೇಷ್ಟ ಹೃಷ್ಟ ಅನಿವಿಷ್ಟ ನಿವಿಷ್ಟ 5
ವೇದಸ್ತೇಯಾರಿ ಮಂದರಧಾರಿ ಭೂವರ ನರಹರಿ
ಭೂ ದಾನವ ಬೇಡಿದ ಚಾಪಕುಠಾರಿ ರಾವಣಕುಲವೈರಿ
ಯಾದವ ವಂಶ ಮಹೋದಧಿ ಚಂದಿರ
ಸಾದಿತ ತ್ರಿಪುರ ಖಳೋದರ ಪಾಹಿ 6
ದಯದಿಂದ ನೋಡೊ ದೀನೋದ್ಧಾರ ಸದ್ಗುಣ ಗಂಭೀರಾ
ಪ್ರಿಯ ನೀನೇ ಎನಗೆ ಲೋಕೋದ್ಧಾರ ಸೌಂದರ್ಯಸಾರಾ
ಹಯಮುಖ ಲೋಕತ್ರಯ ಪತ್ರಯಾಮಯ
ವಯನಗಯ್ಯ ನಾ ಬಯಸುವೆ ನಿನ್ನ7
ಭವ ಭಯಹಾರಿ ಬಿನ್ನೈಸುವೆ ಶೌರಿ
ವಿಹಿತಾಹಿತಗಳು ನಿನ್ನನು ಮೀರಿ ಮಾಳ್ಪೆಗೆ ಕಂಸಾರೀ
ಮಹಿತ ಶಮಲ ಸದಹಿತ ಲಕುಮಿ ಭೂ
ಸಹಿತ ಮನದಿ ಸನ್ನಿಹಿತನಾಗೆಲೋ 8
ದಾತಾ ನೀನಲ್ಲದನ್ಯರರಿಯೇ ಕಂಡವರನು ಕರಿಯೇ
ಪ್ರೀತನಾಗೆನ್ನೊಳು ಶ್ರೀ ಹರಿಯೇ ಮೂರ್ಲೋಕದ ದೊರೆಯೇ
ಶ್ರೀ ತರುಣಿಯೊಡಗೊಡೀ ತನು ಸದನಕೆ ನೀ ತ್ವ
ರಿತದಿ ಜಗನ್ನಾಥ ವಿಠ್ಠಲ 9
********
ಬಾ ವೆಂಕಟಶೈಲಾಧಿಪ ಮನ್ಮನಕೆ ತಡಮಾಡುವುದ್ಯಾಕೆ
ಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆ ನಮಿಸುವೆ ಪ್ರತಿ ಕ್ಷಣಕೆ ಪ
ನೀ ಒಲಿದೆನ್ನ ದಯಾವಲೋಕನದಿ
ಪಾವನಮಾಡಲು ದೇವವರೇಣ್ಯ ಅ.ಪ.
ವೈಕುಂಠಾಧೀಶ ವಿಗತಕ್ಲೇಶ
ಚಿತ್ಸುಖಮಯವಪುಷ
ಭವ ಮದನ ದಿ
ವಾಕರ ಪ್ರಮುಖ ದಿವೌಕಸ ವರದ 1
ಮಮಸಮಾಸ್ವಾಮಿ ಮದಂತರ್ಯಾಮಿ ಸರ್ವಾಂತರ್ಯಾಮಿ
ಅಮಿತಾತ್ಮ ಅತಿರೋಹಿತ ನಿಷ್ಕಾಮಿ ಸೇವಿತ ಶ್ರೀಭೂಮಿ
ಅಮಿತ ಸುಗುಣಪೂರ್ಣ
ಅಮಲಮಹಿಮ ಖಳದಮನ ದಯಾಳೊ 2
ನಾಮಾಭಿಧೇಯ ಲೋಕಾಧ್ಯಕ್ಷಾ ಕಮಲಾಯತಾಕ್ಷ
ಸೋಮ ಭೂಮ ನಿಸ್ಸೀಮ ಮಹಿಮ ತ್ರಿ
ಧಾಮರಾಮ ಘನಶ್ಯಾಮ ಲಲಾಮ 3
ಪವನಂತರಾತ್ಮಾ ನಿರ್ಮಲಾತ್ಮಾ ಪರಮಾತ್ಮ e್ಞÁನಾತ್ಮಾ
ಅವಿಕಾರ ಅತಿರೋಹಿತ ಭೂತಾತ್ಮ ಪೂತಾತ್ಮ ಮಹಿತಾತ್ಮ
ತ್ರಿವಿಧ ಜೀವರಿಗೆ ವಿವಿಧ ಫಲಂಗಳ
ತವಕದಿ ಕೊಟ್ಟವರವರ ಪಾಲಿಸೋ 4
ಸೃಷ್ಟ್ಯಾದಿಕರ್ತ ತ್ರಿಜಗದ್ಭರ್ತ ಲೋಕೈಕ ಸಮರ್ಥ
ವೃಷ್ಣೀಶಾ ವೃಂದಾರಕ ರಿಪುಹರ್ತಾ ಮುಕ್ತರ ಪುರುಷಾರ್ಥ
ಪರಮೇಷ್ಟಿ ಜನಕ ಶಿ
ಷ್ಟೇಷ್ಟ ಹೃಷ್ಟ ಅನಿವಿಷ್ಟ ನಿವಿಷ್ಟ 5
ವೇದಸ್ತೇಯಾರಿ ಮಂದರಧಾರಿ ಭೂವರ ನರಹರಿ
ಭೂ ದಾನವ ಬೇಡಿದ ಚಾಪಕುಠಾರಿ ರಾವಣಕುಲವೈರಿ
ಯಾದವ ವಂಶ ಮಹೋದಧಿ ಚಂದಿರ
ಸಾದಿತ ತ್ರಿಪುರ ಖಳೋದರ ಪಾಹಿ 6
ದಯದಿಂದ ನೋಡೊ ದೀನೋದ್ಧಾರ ಸದ್ಗುಣ ಗಂಭೀರಾ
ಪ್ರಿಯ ನೀನೇ ಎನಗೆ ಲೋಕೋದ್ಧಾರ ಸೌಂದರ್ಯಸಾರಾ
ಹಯಮುಖ ಲೋಕತ್ರಯ ಪತ್ರಯಾಮಯ
ವಯನಗಯ್ಯ ನಾ ಬಯಸುವೆ ನಿನ್ನ7
ಭವ ಭಯಹಾರಿ ಬಿನ್ನೈಸುವೆ ಶೌರಿ
ವಿಹಿತಾಹಿತಗಳು ನಿನ್ನನು ಮೀರಿ ಮಾಳ್ಪೆಗೆ ಕಂಸಾರೀ
ಮಹಿತ ಶಮಲ ಸದಹಿತ ಲಕುಮಿ ಭೂ
ಸಹಿತ ಮನದಿ ಸನ್ನಿಹಿತನಾಗೆಲೋ 8
ದಾತಾ ನೀನಲ್ಲದನ್ಯರರಿಯೇ ಕಂಡವರನು ಕರಿಯೇ
ಪ್ರೀತನಾಗೆನ್ನೊಳು ಶ್ರೀ ಹರಿಯೇ ಮೂರ್ಲೋಕದ ದೊರೆಯೇ
ಶ್ರೀ ತರುಣಿಯೊಡಗೊಡೀ ತನು ಸದನಕೆ ನೀ ತ್ವ
ರಿತದಿ ಜಗನ್ನಾಥ ವಿಠ್ಠಲ 9
********