ವಾದಿರಾಜರು ಕಂಡ ವ್ಯಾಸರಾಜರ ವೈಭವ
ಆನೆ ಬರುತ್ತಿದಿಕೋ – ವ್ಯಾಸರಾಜರೆಂ-
ಬಾನೆ ಬರುತ್ತಿದಿಕೋ |
ಮದವೇರಿ ಹದಮೀರಿ ಮದನಾರಿ ತಾನೆಂಬ
ಅಧಮರ ಎದೆಮೆಟ್ಟಿ ಸೀಳಲು | ಅ.ಪ |
ಮರುತಮತ ನಿರಂತರ ಚರಣದ ಧೂಳಿ
ಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ | ೧ |
ಇದ್ದು ಜಗವಿಲ್ಲೆಂಬ ಶುದ್ಧಮೂರ್ಖತೆಯುಳ್ಳ
ಅದ್ವೈತಿಗಳ ಬುದ್ದಿಮಡುವನ್ನೆ ಕಲಕುತ್ತ | ೨ |
ಜಗಕೆ ಕರ್ತ ನಾನೆಂದು ಬೊಗಳಿಕೊಂಬುವ ನಾ-
ಯಿಗಳ ಕರದಲಿ ಪಿಡಿದು ಮೊಗದ ಮೇಲುಗುಳುತ್ತ | ೩ |
ಮಧ್ವಮುನೀಂದ್ರರ ಶುದ್ಧತೀರ್ಥದಿ ಮಿಂದು
ತಿದ್ದಿದ ನಾಮ ಶ್ರೀಮುದ್ರೆ ಶೃಂಗಾರದಿ | ೪ |
ಮುರಿಯಲು ದುರಳನ ಗರುವವನೆ ಮುನ್ನ
ಸಿರಿಹಯವದನನ ಅರಮನೆ ಪಟ್ಟದ | ೫ |
***
ಆನೆ ಬರುತ್ತಿದಿಕೋ – ವ್ಯಾಸರಾಜರೆಂ-
ಬಾನೆ ಬರುತ್ತಿದಿಕೋ |
ಮದವೇರಿ ಹದಮೀರಿ ಮದನಾರಿ ತಾನೆಂಬ
ಅಧಮರ ಎದೆಮೆಟ್ಟಿ ಸೀಳಲು | ಅ.ಪ |
ಮರುತಮತ ನಿರಂತರ ಚರಣದ ಧೂಳಿ
ಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ | ೧ |
ಇದ್ದು ಜಗವಿಲ್ಲೆಂಬ ಶುದ್ಧಮೂರ್ಖತೆಯುಳ್ಳ
ಅದ್ವೈತಿಗಳ ಬುದ್ದಿಮಡುವನ್ನೆ ಕಲಕುತ್ತ | ೨ |
ಜಗಕೆ ಕರ್ತ ನಾನೆಂದು ಬೊಗಳಿಕೊಂಬುವ ನಾ-
ಯಿಗಳ ಕರದಲಿ ಪಿಡಿದು ಮೊಗದ ಮೇಲುಗುಳುತ್ತ | ೩ |
ಮಧ್ವಮುನೀಂದ್ರರ ಶುದ್ಧತೀರ್ಥದಿ ಮಿಂದು
ತಿದ್ದಿದ ನಾಮ ಶ್ರೀಮುದ್ರೆ ಶೃಂಗಾರದಿ | ೪ |
ಮುರಿಯಲು ದುರಳನ ಗರುವವನೆ ಮುನ್ನ
ಸಿರಿಹಯವದನನ ಅರಮನೆ ಪಟ್ಟದ | ೫ |
****