Showing posts with label ಈಶ ಬಾರೋ ಕಮಲೇಶ ಬಾರೋ ankita vijayeendrarama EESHA BAARO KAMALESHA BAARO. Show all posts
Showing posts with label ಈಶ ಬಾರೋ ಕಮಲೇಶ ಬಾರೋ ankita vijayeendrarama EESHA BAARO KAMALESHA BAARO. Show all posts

Wednesday, 7 July 2021

ಈಶ ಬಾರೋ ಕಮಲೇಶ ಬಾರೋ ankita vijayeendrarama EESHA BAARO KAMALESHA BAARO

Audio by Vidwan Sumukh Moudgalya


 ಶ್ರೀ ವಿಜಯೀಂದ್ರತೀರ್ಥರ ಕೃತಿ 


 ರಾಗ : ರಂಜನಿ    ಆದಿತಾಳ 


ಈಶ ಬಾರೋ ಕಮಲೇಶ ಬಾರೋ

ಶೇಷನ್ನ ಹಾಸಿಗೆ ಮ್ಯಾಲೊರಗಿಪ ಸರ್ವೇಶ ಬಾರೋ॥ಪ॥


ವಾಸುದೇವನಾಗಿ ಹಸುವ ಕಾಯಿದ ಹೃಷಿಕೇಶ ಬಾರೋ

ಹೇಸಾದೆ ರಕ್ಕಸರನ ಸಂಹ್ವರಿಪ ಬಲರಾಸಿ ಬಾರೋ

ಸಾಸಿರನಾಮದಿ ನಿನ್ನ ತುತಿಸುವರ ಲೇಶ ಬಾರೋ

ವ್ಯಾಸಾವತಾರದಿ ಭಕತರ್ಗೆ ಸುಕೃತೋಪದೇಶ ಬಾರೋ॥೧॥


ಪುಟ್ಟಿಸಿ ಜಗವ ಪಾಲಿಸುವದಕೆ ನಿರ್ಮಿಸಿದ್ಧಿ ಬಾರೋ

ಪುಟ್ಟುತಲೆ ಜಾರ ಚೋರನೆನಿಸಿದ ಕೃಷ್ಣ ಬಾರೋ

ಪುಟ್ಟ ಬಾಯಲಿ ಜಗವನು ಮಾತೆಗರುಪಿದ ಧಿಟ್ಟ ಬಾರೋ

ದುಷ್ಟ ಚಾಣೂರಮಲ್ಲರ ಮಡುಹಿದ ಜಗಜಟ್ಟಿ ಬಾರೋ॥೨॥


ದಶರಥನಿಷ್ಠವ ಸಲೀಸಿದ ಜಗದರಸೆ ಬಾರೋ

ದಶಶಿರನನುಜ ವಿಭೀಷಣನ ಕಾಯಿದ ಸರಸ ಬಾರೋ

ವಸುಧಿ ಪೆರ್ಮಣಿ ಜ್ಯಾನಕಿಗೆ ನೇಹಕೋಶ ಬಾರೋ

ಹಸುಳೆ ವಿಜೇಂದ್ರನ ಹೃದಯಾಂಬುಜಕೆ ರಾಜಹಂಸ ಬಾರೋ॥೩॥

****


by vijayendra teertharu
ಈಶ ಬಾರೋ ಕಮಲೇಶ ಬಾರೋ ।
ಶೇಷಾನ್ನ ಹಾಸಿಗೆ ಮ್ಯಾಲೊರಗಿಪ । ಸ ।
ರ್ವೇಶ ಮೂಲರಾಮ ಬಾರೋ ।। ಪ ।।

ವಾಸುದೇವನಾಗಿ ಹಸುವ ಕಾಯಿದ ।ಹೃಷಿಕೇಶ ಬಾರೋ ।
ಹೇಸಾದೆ ರಕ್ಕಸರನು ಸಂಹ್ವರಿಪ । ಬಲ ।ರಾಶಿ ಬಾರೋ ।।
ಸಾಸಿರನಾಮದಿ ನಿನ್ನ ತುತಿಸುವರ ।ಲೇಶ ಬಾರೋ ।
ವ್ಯಾಸಾವತಾರದಿ । ಭಕತ ।ರ್ಗೆ ಸುಕೃತೋಪದೇಶ ಬಾರೋ ।। 1 ।।

ಪುಟ್ಟಿಸಿ ಜಗವ ಪಾಲಿಸುವದಕೆ ನಿರ್ಮಿಸಿದ್ದಿ ಬಾರೋ ।
ಪುಟ್ಟುತಲೆ ಜಾರ ಚೋರನೆನಿಸಿದ ಕೃಷ್ಣ ಬಾರೋ ।
ಪುಟ್ಟ ಬಾಯಲಿ ಜಗವನು ಮಾತೆಗರುಪಿದ ಧಿಟ್ಟ ಬಾರೋ ।
ದುಷ್ಟ ಚಾಣೂರ ಮಲ್ಲರ ಮಡುಹಿದ ಜಗಜಟ್ಟಿ ಬಾರೋ ।। 2 ।।

ದಶರಥನಿಷ್ಠವ ಸಲಿಸೀದ ಜಗದರಸೆ ಮೂಲರಾಮ ಬಾರೋ ।
ದಶ ಶಿರನನುಜ ವೀಭೀಷಣನ ಕಾಯಿದ ಸರಸ ಬಾರೋ ।
ವಸುಧಿ ಪೆರ್ಮಣಿ ಜ್ಯಾನಕಿಗೆ ನೇಹಕೋಶ ಬಾರೋ ।
ಹಸುಳೆ ವಿಜೇಂದ್ರನ ಹೃದಯಾಂಬುಜಕೆ ರಾಜಹಂಸ ಬಾರೋ ।। 3 ।।
********

 ಶ್ರೀ ವಿಜಯೀಂದ್ರತೀರ್ಥರ ಉಗಾಭೋಗ


ತಪ್ಪುಗಳನರಸ ತನ್ನ ನಂಬಿದವರ ಶ್ರೀಪತಿ

ತಪ್ಪುಮಾಡಿದ ಅಜಮಿಳ ಉಮಾಪತಿ ಮುಖರ

ತಪ್ಪು ನೋಡಿದನೆ ಎ-

ನ್ನಪ್ಪ ಶ್ರೀವಿಜಯೀಂದ್ರರಾಮ ದಯಾನಿಧಿ