ಶ್ರೀ ರಾಗ ಆದಿತಾಳ
ಹಾಲು ಮಾರಲು ಬಂದೆವಮ್ಮ ಈ ಮಧುರಾಪುರಕ್ಕೆ ||ಪ||
ಸೀರೆ ಶೃಂಗಾರದ ಕುಪ್ಪಸವ ತೊಟ್ಟು ಹರಿನಾಮಗಳಿಟ್ಟು
ದೋರೆ ಬಂಗಾರದ ಬಳೆ ಕೈಕಟ್ಟು ಕಳವಳಿಸುತಲಿಟ್ಟು
ಕ್ಷೀರದ ಬುಟ್ಟಿ ಶಿರದಲಿಟ್ಟು
ಮಾರಬಂದೆವೆ ನಂದನ ಕಂಡು
ದಾರಿಯೊಳಗೆ ನಮ್ಮ ಗೊಲ್ಲನ ಕಂಡು
ತಾರೆಂದು ಸುಂಕವ ಕರಹಿಡಕೊಂಡು
ಘೋರಿಸುತ ನಾವುಟ್ಟ ಸೀರೆಯ ಸೆಳಕೊಂಡು ||
ಎಷ್ಟು ಹಟದವನೆ ಕೃಷ್ಣ ಚೋರ ಮುತ್ತಿನಸರ
ಕಟ್ಟಾಣಿಗುಂಡಿನ ಜ್ಯೋಕಂಧವಳನ ಸರ ನೀಲದುಂಗುರ
ಕೊಟ್ಟೇನೆಂದರೆ ರೊಕ್ಕಗಳಿಲ್ಲ
ಕೃಷ್ಣ ಆರ್ಮಾತ ಕೇಳುವನಲ್ಲ |
ಇಷ್ಟು ಮಾತಿಗೆ ದಿಟ್ಟನೋರೆ ಗೊಲ್ಲ ||
ಬಾಲೆ ಬಾರೆಂದು ಬಣ್ಣಿಸಿ ಕರೆವ ಹಸ್ತಗಳನೆ ಮುಗಿವ
ತೋಳು ತೊಡೆ ಗಲ್ಲವ ಕುಚಗಳ ಪಿಡಿವ ಗಡಿಗೆಯ ಒಡೆವ
ಥಾಲಿ ಥಾಲಿ ಹಾಲ್ ಮೊಸರನೆ ಸುರಿವ
ಕಾಲಿಗೆ ಬಿದ್ದೆವೆ ಕಾಡಬೇಡೆಂದು
ಭಾಳ ಹೊತ್ತಾಯಿತು ಹೋಗಬೇಕೆಂದು
ಶ್ರೀಹರಿ ಪುರಂದರವಿಠಲನ ದಯದಿಂದ ||
********
ಹಾಲು ಮಾರಲು ಬಂದೆವಮ್ಮ ಈ ಮಧುರಾಪುರಕ್ಕೆ ||ಪ||
ಸೀರೆ ಶೃಂಗಾರದ ಕುಪ್ಪಸವ ತೊಟ್ಟು ಹರಿನಾಮಗಳಿಟ್ಟು
ದೋರೆ ಬಂಗಾರದ ಬಳೆ ಕೈಕಟ್ಟು ಕಳವಳಿಸುತಲಿಟ್ಟು
ಕ್ಷೀರದ ಬುಟ್ಟಿ ಶಿರದಲಿಟ್ಟು
ಮಾರಬಂದೆವೆ ನಂದನ ಕಂಡು
ದಾರಿಯೊಳಗೆ ನಮ್ಮ ಗೊಲ್ಲನ ಕಂಡು
ತಾರೆಂದು ಸುಂಕವ ಕರಹಿಡಕೊಂಡು
ಘೋರಿಸುತ ನಾವುಟ್ಟ ಸೀರೆಯ ಸೆಳಕೊಂಡು ||
ಎಷ್ಟು ಹಟದವನೆ ಕೃಷ್ಣ ಚೋರ ಮುತ್ತಿನಸರ
ಕಟ್ಟಾಣಿಗುಂಡಿನ ಜ್ಯೋಕಂಧವಳನ ಸರ ನೀಲದುಂಗುರ
ಕೊಟ್ಟೇನೆಂದರೆ ರೊಕ್ಕಗಳಿಲ್ಲ
ಕೃಷ್ಣ ಆರ್ಮಾತ ಕೇಳುವನಲ್ಲ |
ಇಷ್ಟು ಮಾತಿಗೆ ದಿಟ್ಟನೋರೆ ಗೊಲ್ಲ ||
ಬಾಲೆ ಬಾರೆಂದು ಬಣ್ಣಿಸಿ ಕರೆವ ಹಸ್ತಗಳನೆ ಮುಗಿವ
ತೋಳು ತೊಡೆ ಗಲ್ಲವ ಕುಚಗಳ ಪಿಡಿವ ಗಡಿಗೆಯ ಒಡೆವ
ಥಾಲಿ ಥಾಲಿ ಹಾಲ್ ಮೊಸರನೆ ಸುರಿವ
ಕಾಲಿಗೆ ಬಿದ್ದೆವೆ ಕಾಡಬೇಡೆಂದು
ಭಾಳ ಹೊತ್ತಾಯಿತು ಹೋಗಬೇಕೆಂದು
ಶ್ರೀಹರಿ ಪುರಂದರವಿಠಲನ ದಯದಿಂದ ||
********