Showing posts with label ಶ್ರೀಗುರು ಸೇವೆಯ ಮಾಡಿ ಸಾಯೋಜ್ಯ ಸದ್ಗತಿ ಕೂಡಿ mahipati. Show all posts
Showing posts with label ಶ್ರೀಗುರು ಸೇವೆಯ ಮಾಡಿ ಸಾಯೋಜ್ಯ ಸದ್ಗತಿ ಕೂಡಿ mahipati. Show all posts

Wednesday, 1 September 2021

ಶ್ರೀಗುರು ಸೇವೆಯ ಮಾಡಿ ಸಾಯೋಜ್ಯ ಸದ್ಗತಿ ಕೂಡಿ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಶ್ರೀಗುರು ಸೇವೆಯ ಮಾಡಿ ಸಾಯೋಜ್ಯ ಸದ್ಗತಿ ಕೂಡಿ ಪ 

ಮೂರು ರತ್ನದ ಪ್ರಭೆ ನೋಡಿ ಮೂರು ವಟ್ಟೆಯಾ ಮುರಿಗೂಡಿ ಆರು ಸ್ಥಳವ ಮುಟ್ಟಿನೋಡಿ ಏರಿಸು ಪಥವನು ಕೂಡಿ 1 

ತುಟ್ಟತುದಿಯಲೇರಿ ನೋಡಿ ಮುಟ್ಟಿ ಚಿದ್ಘನ ಬೆರೆದಾಡಿ ನಟ್ಟನೆವೆ ಒಡಗೂಡಿ ಗುಟ್ಟುಗುಹ್ಯ ನಿಜವು ಹೇಳಬ್ಯಾಡಿ 2 

ಮಹಿಪತಿ ನಿನ್ನೊಳು ನೋಡಿ ಐವರೊಂದಾಗಿನ್ನು ಕೂಡಿ ಪಾದ ಮಾಡಿ ಪಥ ಬೆರೆದಾಡಿ 3

***