Showing posts with label ಬೇಡಿಕೊಂಬೆನೊ ಗೋಪಾಲ ನಿನ್ನ ಬೇಡಿಕೊಂಬೆ ಕರಗಳೆರೆಡ namagiri. Show all posts
Showing posts with label ಬೇಡಿಕೊಂಬೆನೊ ಗೋಪಾಲ ನಿನ್ನ ಬೇಡಿಕೊಂಬೆ ಕರಗಳೆರೆಡ namagiri. Show all posts

Thursday, 5 August 2021

ಬೇಡಿಕೊಂಬೆನೊ ಗೋಪಾಲ ನಿನ್ನ ಬೇಡಿಕೊಂಬೆ ಕರಗಳೆರೆಡ ankita namagiri

 ..

kruti by ವಿದ್ಯಾರತ್ನಾಕರತೀರ್ಥರು vidyaratnakara teertharu 


ಬೇಡಿಕೊಂಬೆನೊ ಗೋಪಾಲ ನಿನ್ನ

ಬೇಡಿಕೊಂಬೆ ಕರಗಳೆರೆಡ ಪ


ಜೋಡಿಸಿ ನಿನ್ನೊಳು ಸುದೃಢ ಭಕುತಿ

ಮಾಡಿ ಸತತ ಭಜಿಸುವಂಥ

ರೂಢಿ ಎನಗೆ ಕೊಡು ನೀನೆಂದು ಅ.ಪ


ಕ್ಲೇಶಪಡಿಸದೆ ಸಲಹೆನ್ನ ಜಗಗಧೀಶ ಮರೆಯದೆ

ಬಾರದ್ಯಾಕೊ ಕರುಣ ಲೇಶಗುಣನಿಧೆ

ಆಶಾಪಾಶ ಬದ್ಧನಾಗಿ ದೇಶ ದೇಶ ತಿರುಗಿ ಕರುಣ

ಲೇಶವಿಲ್ಲದ ದುರುಳ ವಸುಮತೀಶರೊಳ್ ಬೇಡಿಸದಂತೆ 1


ಇಂದುವzನÀನೆ ಮುನಿವರ್ಯಹೃದರ

ವಿಂದಸದನೆ ವರಗೋಪಯುವತಿ ಬೃಂದಮದನನೆ

ಇಂದಿರೇಶ ನಿನ್ನ ಪಾದಾರವೃಂದಗಳನು ಹೃದಯವೆಂಬೊ

ಮಂದಿರದೊಳಗೆ ನಿಲ್ಲಿಸಿ ಚಿದಾ-

ನಂದಮೂರ್ತಿಯ ಪೂಜಿಪೆನೆಂದು 2


ಧೀರ ಚರಣನೆ ಮುರಾರಿ ಧರಣಿ ಭಾರಹರಣನೆ

ಭುಜಗೇಶಫಣಿ ವಿದಾರಿ ಚರಣನೆ

ಮಾರಜನಕ ನೀರಜಾಕ್ಷ ನಾರಸಿಹ್ಮ ನಾಮಗಿರೀಶ

ಧೀರವರ ಶ್ರೀ ಮಧ್ವಮತದ ಸಾರ ಎನಗೆ ತಿಳಿಬೇಕೆಂದು 3

***