Showing posts with label ಏನು ಕರುಣಾಳೋ ದೇವವರೇಣ್ಯ vijaya vittala. Show all posts
Showing posts with label ಏನು ಕರುಣಾಳೋ ದೇವವರೇಣ್ಯ vijaya vittala. Show all posts

Wednesday, 16 October 2019

ಏನು ಕರುಣಾಳೋ ದೇವವರೇಣ್ಯ ankita vijaya vittala

ವಿಜಯದಾಸ
ಏನು ಯೇನು ಕರುಣಾಳೋ ದೇವವರೇಣ್ಯ
ಯೇನು ಭಕುತರಧೀನನೋ ಪ

ಕನ್ನಯ್ಯ ಧ್ಯಾನವಿತ್ತ ನಾರಾಯಣಾ ಅ.ಪ.

ಅನಂತಾನಂತ ಜನುಮದಲ್ಲಿ ಅನ್ನೋದಕ ಕಾಣದಿದ್ದ ದರಿ
ದ್ರನ್ನ ಕರವನೆ ಪಿಡಿದು ಮೃಷ್ಠಾನ್ನ ಭೋಜನ ಮಾಡಿಸಿ
ಒಡನೆ ತಿರುಗೂವ
ಕನ್ನಿ ಸಂಕಲ್ಪ ಕೆದುರುಗಾಣದೆ ಘನ್ನ ಮೂರುತಿ ಕೇಶವಾ 1

ಪಾವನವ ಮಾಡಿದನು ಬಲು ಕೃ
ಪಾವಲೋಕನ ಪರಮ ಸೂರ್ಯರ್ ರಾವಣಾಸುರ ಮರ್ದನಾ
ಕವಿ ಮನ್ನಿಸಿ ತಪ್ಪನೆಣೆಸದೆ
ದೇವ ಜಗತ್ರಯ ಜಿತ ಕರಣ ವಸುದೇವ ದೇವಕೀನಂದನಾ2

ದೋಷರಾಶಿಯೊಳಿದ್ದು ಅನುದಿನ
ಮೋಸಗೊಳಿಸುವ ಭವವನಧಿ ಮಧ್ಯ ಈಶ ಕಡಕಾಣಲಾರದೆ
ಕ್ಲೇಶದಲಿ ಸಂಚರಿಸುತ್ತಿಪ್ಪ ಮಾನೀಶ ಪಶುವನು ನೋಡಿ ವೇಗದಿ
ಲೇಸು ಕೊಡುವೆನೆಂದು ಆನಂದ ದಾಸರೊಳಗಿದ್ದ ನರಹರೀ 3

ಡಂಬಕಾ ಭಕುತಿಯನೆ ಬಿಡಿಸೀ
ವೆಂಬೋದೆ ನಿರ್ಮಲ ಮಾಡೀ
ಪಾದ ಇಂಬು ಬಯಸುವ ಸುಖವೆ ಪಾಲಿಸಿ
ಪೊಂಬುಡೆಧರ ಗೋವಿಂದಾ 4

ಜಪತಪಾನುಷ್ಠಾನ ನಾನಾ ವುಪವಾಸ ವ್ರತದಾನ ಧರ್ಮಗ
ಳಪರಿಮಿತವಾದ ಯಾಗ ಕನ್ಯಾದಾನ ನಾನಾಲೋಚನ
ಸ್ವಪನದಲಿ ಕಾಣಿಸುವ ತಾನೆ
ಕೃಪಣರಿಗೆ ವಲಿದಲ್ಲದೆ ಬಿಡ ಚಪಲ ವಿಜಯವಿಠಲಾ5
********