ramachandra teertha stutih
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ " ..
ರಾಮಚಂದ್ರ ಗುರುವೇ । ಮೂಲ ।
ರಾಮಚಂದ್ರನ ಪೂಜಿಪ ಧೀರಾ ।। ಪಲ್ಲವಿ ।।
ವಿಬುಧೆಂದ್ರತೀರ್ಥರಿಗೆ -
ತುರ್ಯಾಶ್ರಮ ನೀಡಿ ।
ಸುಬುಧರ ಸಮ್ಮುಖದಲ್ಲಿ -
ಪಟ್ಟಾಭಿಷೇಕವ ಮಾಡಿದ ।। ಚರಣ ।।
ಗುರು ವಾಗೀಶರಲಿ -
ಮಧ್ವ ಶಾಸ್ತ್ರವ ಓದಿ ।
ಗುರು ಜಿತಾಮಿತ್ರರನ್ನೇ -
ಪೌತ್ರನನ್ನಾಗಿ ಪಡೆದ ।। ಚರಣ ।।
ವೈಶಾಖ ಶುದ್ಧ ಆರನೇ -
ತಿಥಿಯಲಿ ವೈಷ್ಣವ ದೇಶಿಕ ।
ವೈಷ್ಣವಾಗ್ರಗಣ್ಯನಾ ಪಿತ -
ವೇಂಕಟನಾಥನ ಪುರ ಸೇರ್ದ ।।
***