Showing posts with label ಬಂದು ಮಧುರೆಗೆ ತಾ ಕೊಂದು ಮಾತುಳನ ಬಂಧನ ರಹಿತವಾಗಲು ಮಾತಾಪಿತರು bheemesha krishna. Show all posts
Showing posts with label ಬಂದು ಮಧುರೆಗೆ ತಾ ಕೊಂದು ಮಾತುಳನ ಬಂಧನ ರಹಿತವಾಗಲು ಮಾತಾಪಿತರು bheemesha krishna. Show all posts

Wednesday 1 September 2021

ಬಂದು ಮಧುರೆಗೆ ತಾ ಕೊಂದು ಮಾತುಳನ ಬಂಧನ ರಹಿತವಾಗಲು ಮಾತಾಪಿತರು ankita bheemesha krishna

 ..

ಬಂದು ಮಧುರೆಗೆ ತಾ ಕೊಂದು ಮಾತುಳನ

ಬಂಧನ ರಹಿತವಾಗಲು ಮಾತಾಪಿತರು 1

ಜರೆಯಸುತನ ಬಾಧೆಯು ಘನವಾಗುತಿರಲು

ಜಲದೊಳು ದ್ವಾರಕಾಪುರವ ನಿರ್ಮಿಸಿದ 2

ಯದುನಂದನ ತನ್ನಗ್ರಜ ಬಲರಾಮನ ಕೂಡ

ಮುದದಿಂದಾವಾಸ ಯಾದವರ ಸಹಿತಾಗಿ3

ಇರುತಿರೆ ರುಕುಮ ತನ್ನನುಜೆ ಸಹಿತಾಗಿ

ಚೆಲುವ ಸುಂದರಿಗೆ ಬ್ಯಾಗ್ವಿವಾಹದುತ್ಸವವು 4

ಅಕ್ಕರದನುಜೆ ರುಕ್ಮಿಣೀದೇವಿಗಿನ್ನು

ಚಿಕ್ಕ ಚೆನ್ನಿಗನಾದ ತಕ್ಕ ವರನ್ಯಾರು 5

ವಸುಧೆಪಾಲರ ಮಧ್ಯ ಶಿಶುಪಾಲನೀಗಧಿಕ

ಕುಸುಮಗಂಧಿನಿಗೆ ನಿಶ್ಚಯವ ಮಾಡಿದರು 6

ಅಗ್ರಜನ್ವಾಕ್ಯವ ಕೇಳಿ ಮನದಲ್ಯೋಚಿಸುತ

ಘನಮಹಿಮಗೆ ಓಲೆ ಬರೆದಳು ಲಿಖಿತ 7

ಹರಿ ನೀನೆ ಮುರವೈರಿ ಸರುವಾಂತರಯಾಮಿ ನಿನ್ನ

ಸ್ಮರಣೆ ದರುಶನ ಮಾತ್ರಕೆ ಪರಮಲಾಭೆನಗೆ 8

ಎಂದೆಂದಿಗೆನ ಕೂಡಾನಂದವ ಬಟ್ಟು

ಇಂದೆ ಕೈಬಿಟ್ಟು ದೂರಿಂದ ನೋಡುವರೆ 9

ಪ್ರಾಣಪತಿ ನೀ ಪಾಣಿಗ್ರಾಣ (ಗ್ರಹಣ?) ಮಾಡದಲೆ ಇರೆ

ಪ್ರಾಣ ಉಳಿಯದು ಕೇಳೆನ್ನಾಸೆ ಹುಸಿಯಲ್ಲ 10

ಸರ್ವರ್ವಂದಿತ ನಿನ್ನ ಅರಮನೆದ್ವಾರ

ಕಾದಿರುವೋ ಭೃತ್ಯರಿಗೊಪ್ಪಿಸಿಕೊಡದೆ ಕರುಣಾಳು 11

ದೇಶಕಾಲಕೆ ನಾ ನಿನ್ನ ಸಮಳ್ವಾಸುದೇವ

ಗುಣಕಸಮಳೆಂದು ಉದಾಸೀನ ಮಾಡಬ್ಯಾಡ 12

ವಕ್ಷಸ್ಥಳದ ವಾಸಿಯ ತುಚ್ಛಮಾಡದಲೆ

ಲಕ್ಷೀಲೆ ಕರೆದೊಯ್ಯೊ ಪಕ್ಷಿವಾಹನನೆ 13

ಎನ್ನ ಬಿನ್ನಪ ಕೇಳಿ ಮನ್ನಿಸೊ ಕೃಷ್ಣ

ಪನ್ನಂಗಶಯನ ನಿನ್ನ ಪಾದಕ್ಕೆರಗುವೆನು 14

ಸುರರ್ವಂದಿತ ಪಾದ ಉರಗ ಮೆಟ್ಟಿದ ಪಾದ

ನಿನ್ನ ಧ್ವಜವಜ್ರಾಂಕುಶ ಪಾದಕ್ಕೆರಗಿ ನಮಿಸುವೆನು 15

ಬರೆದ ಓಲೆಗೆ ಹಚ್ಚಿ ಅರೆದರಿಷಿಣವ

ಕರವ ಜೋಡಿಸಿ ಕೊಟ್ಟು ಕಳುಹೆ ದ್ವಾರಕೆಗೆ16

ಜಗದೀಶಗೆ ಪತ್ರವ ಜಾಣೆ ತಾ ಬರೆದು

ದ್ವಿಜನ ಕೈಯಲಿ ಕೊಟ್ಟು ಕಳುಹೆ ದ್ವಾರಕೆಗೆ 17

ವ್ಯಾಳ್ಯ ಮೀರುವುದೆಂದು ಎದ್ದಾಗ ರುಕುಮ

ಭೇರಿ ತಾಡನ ಮಾಡಿಸೆ ಭೋರೆಂಬೊ ರಭಸ 18

ಎರೆದು ಮುಡಿಯನ್ಹಿಕ್ಕಿ ಜಡೆಯಬಂಗಾರ

ಚೌರಿ ರಾಗಟೆ ಗೊಂಡ್ಯ ಧರೆಗೆ ಮುಟ್ಟುತಿರೆ 19

ಅಚ್ಚ ಜರತಾರಿ ಹೊಳೆವಷ್ಟಪತ್ರಿಕೆಯು

ಮ್ಯಾಲೊಪ್ಪುವೊ ಪಟ್ಟೀನೊಡ್ಯಾಣ ಸರಿಸಿಟ್ಟು 20

ಕಂಕಣ ಚೂಡ್ಯ ದ್ವಾರ್ಯ ್ಹರಡಿ ಕೈಕಟ್ಟು ಮ್ಯಾ-

ಲ್ವೊಂಕಿ ನಾಗಮುರಿಗೆಗೊಪ್ಪುವ ಕಂಚುಕ ತೊಟ್ಟು 21

ಹರಳು ಮಾಣಿಕ್ಯದ್ವಾಲೆ ಬುಗುಡಿ ಬಾವುಲಿಯು

ಹೊಳೆವೊ ಮುತ್ತಿನ ಮೂಗುತಿ ಥಳಥಳಸುತಲಿ 22

ಹಾರ ಪದಕದ ಮಧ್ಯ ಮೇಲಾದೇಕಾವಳಿಯು

ತೋರ ಮುತ್ತಿನ ದಂಡೆ ಲೋಲ್ಯಾಡುತಿರಲು 23

ಕನ್ನಡ್ಯಂದದಿ ಗಲ್ಲ ಕಳೆಯ ಸುರಿಸುತಲಿ

ಸಣ್ಣಮುತ್ತಿನ ಗೊಂಚಲು ಸರಗಳಲೆಯುತಲಿ 24

ಝಗಝಗಿಸುತ ಬಂದಳು ಜಗದ ಮೋಹಿನಿಯು

ಮುಗುಳು ನಗೆಯಿಂದ ಮೂರ್ಜಗವ ಮೋಹಿಸುತ 25 25

ಗೆಜ್ಜೆ ಸರಪಳಿ ಅಂದಿಗೆ ಹೆಜ್ಜೆಸರಿಸಿಡುತ

ನಿರ್ಜರೇಶನ ಮಾರ್ಗದ ನಿರೀಕ್ಷಣದಿಂದ 26

ಸುತ್ತ ಮುತ್ತೈದೇರು ಕತ್ತಿಕೈ ಭಟರು

ತುತ್ತೂರಿ ವಾದ್ಯ ಭೇರಿ ತಮ್ಮಟೆ ಕಾ(ಕಹ?) ಳೆ 27

ನಡೆದು ರುಕ್ಮಿಣಿ ಹೊಕ್ಕಳು ಗುಡಿಯ ಮಹಾದ್ವಾರ

ಮೃಡನರಸಿಯ ಪೂಜಿಸಿ ದೃಢಭಕ್ತಿಯಲಾಗ 28

ಹಿರಿಯ ಮುತ್ತೈದೇರಿಗೆ ಮರದ ಬಾಗಿನವ

ಅರೆದರಿಷಿಣ ಕುಂಕುಮ ಕರದಲ್ಲಿ ಗಂಧ 29

ಕಡಲೆ ಕಬ್ಬು ಕಾಯಿ ಉಡಿಯ ತುಂಬುತಲಿ

ಕಡಲಶಯನನ ಮಾರ್ಗವ ಬಿಡದೆ ನೋಡುತಲಿ 30

ಮಂಗಳಗೌರಿಯೆದುರಿಗೆ ಮುತ್ತೈದೇರು

ಅಂಗನೆ ಭೈಷ್ಮಿ ಪೀಠದಲಿ ಕುಳ್ಳಿರಿಸಿ 31

ಮಂಗಳಾಂಗನು ನಿನ್ನ ಪತಿಯಾಗಲೆಂದು

ಮಂಗಳಸೂತ್ರ ಬಂಧನ ಮಾಡಲು ನಗುತ 32

ಮಾರನಯ್ಯನ ಮೋರೆ ನೋಡಿದಾಕ್ಷಣದಿ ಮಹಾ-

ದ್ವಾರದಿ ಮುತ್ತು ಸೂರ್ಯಾಡೇನೀಕ್ಷಣದಿ 33

ಹರನ್ವಲ್ಲಭೆ ತೋರೆ ಮುರಹರನ ಕರಿವರನ ಭಯ-

ಹರನ ಶ್ರೀಧರನ ಕೊಡುವೆನೀ ದೇವರನು 34

ಮಚ್ಛಲೋಚನೆ ಧ್ಯಾನ ಅಚ್ಚ್ಯುತನಲ್ಲೇ ಇಡೆ ಭಕ್ತ-

ವತ್ಸಲ ಬಂದನೆಂದೆಚ್ಚರಿಸಿದರು35

ಹತವಾದ ಪ್ರಾಣ ಬರಲತಿ ಹರುಷವ್ಹ್ಯಾಗೋ

ರಥವ ಕಾಣುತ ರುಕ್ಮಿಣಿ ಕೃತಕೃತ್ಯಳಾಗ 36

ಸೃಗಾಲದ ಮಧ್ಯ ಒಂದು ಸಿಂಹ ಹೊಕ್ಕಂತೆ ಶ್ರೀನಾಥ

ರುಕ್ಮಿಣಿಯ ಸ್ವೀಕಾರ ಮಾಡಿದನು 37

ರಥವು ಮುಂದಕೆ ಸಾಗೆ ಪಥವು ತೋರದಲೆ

ಅಲೆ ಬಾಯ ಬಿಡುತ ಶ್ರೀಪತಿಯ ಬೆನ್ನ ್ಹತ್ತಿ 38

ಬಂದ ರುಕುಮನ ಗಡ್ಡ ಮಂಡಿ ಸವರುತಲಿ

ಬಂಧನ ರಥಕೆ ಮಾಡಿದ ನಂದಸುತನು 39

ವಾರೆನೋಟದಿ ನೋಡಿ ಮೋರೆ ತಗ್ಗಿಸಿದ

ನಾರಿ ರುಕ್ಮಿಣಿಯ ಮುಖ ನೋಡಿ ಶ್ರೀಕೃಷ್ಣ 40

ಕರುಣವಿರಲಿಕ್ಕೆ ನೀ ಬರೆದ್ಯಾತಕೆ ಓಲೆ

ತಿಳಿಯಲಿಲ್ಲವೆ ಎಂದೀಪರಿ ಹಾಸ್ಯದಿ ನುಡಿದ41

ಒಡಹುಟ್ಟಿದವನಲ್ಲಿ ಕಡು ಮೋಹವಿನ್ನೂ

ಹಿಡಿಯದೆನ್ನೊಳು ಕೋಪ ಬಿಡುರುಕ್ಮಿಣಿ ಎಂದ 42

<ಈಔಓಖಿ ಜಿಚಿಛಿe='ಓuಜ (sorry, incomplete)

***