ರಾಗ ಸಾವೇರಿ ಆದಿತಾಳ
ಎಂತು ನಿನ್ನ ಪೂಜೆಗಳ ಮಾಡಿ ಮೆಚ್ಚಿಸುವೆನಯ್ಯಾ ||ಪ||
ಚಿಂತಾಯಕನೆ ನಿನ್ನ ನಾಮ ಎನಗೊಂದು ಕೋಟಿ ||ಅ||
ಪವಿತ್ರೋದಕದಿ ಪಾದವ ತೊಳೆವೆನೆಂದರೆ
ಪಾವನವಾದ ಗಂಗೆ ಪಾದೋದ್ಭವೆ
ನವಕುಸುಮವನು ಸಮರ್ಪಿಸುವೆನೆಂದರೆ
ಅಜ ಉದುಭವಿಸಿದನು ನಿನ್ನ ಪೊಕ್ಕಳ್ಹೂವಿನಲಿ ||
ದೀಪ ಬೆಳಗುವೆನೆ ನಿನ್ನ ಕಂಗಳೆ ಸಪ್ತ-
ದ್ವೀಪಂಗಳೆಲ್ಲವ ಬೆಳಗುತಿವೆ
ಆಪೋಶನವಾದರು ಈವನೆಂಬೆನೆ
ಆಪೋಶನವು ಆಯಿತೇಳು ಅಂಬುಧಿಯು ||
ಕಾಣಿಕಿತ್ತಾದರು ಕೈಮುಗಿವೆಂಬೆನೇ
ರಾಣಿವಾಸವು ಸಿರಿದೇವಿ ನಿನಗೆ
ಮಾಣದೆ ಮನದೊಳು ನಿನ್ನ ನಾಮ ಸ್ಮರಣೆ
ಎನ್ನಾಧೀನವ ಮಾಡೊ ಪುರಂದರವಿಠಲ ||
********
ಎಂತು ನಿನ್ನ ಪೂಜೆಗಳ ಮಾಡಿ ಮೆಚ್ಚಿಸುವೆನಯ್ಯಾ ||ಪ||
ಚಿಂತಾಯಕನೆ ನಿನ್ನ ನಾಮ ಎನಗೊಂದು ಕೋಟಿ ||ಅ||
ಪವಿತ್ರೋದಕದಿ ಪಾದವ ತೊಳೆವೆನೆಂದರೆ
ಪಾವನವಾದ ಗಂಗೆ ಪಾದೋದ್ಭವೆ
ನವಕುಸುಮವನು ಸಮರ್ಪಿಸುವೆನೆಂದರೆ
ಅಜ ಉದುಭವಿಸಿದನು ನಿನ್ನ ಪೊಕ್ಕಳ್ಹೂವಿನಲಿ ||
ದೀಪ ಬೆಳಗುವೆನೆ ನಿನ್ನ ಕಂಗಳೆ ಸಪ್ತ-
ದ್ವೀಪಂಗಳೆಲ್ಲವ ಬೆಳಗುತಿವೆ
ಆಪೋಶನವಾದರು ಈವನೆಂಬೆನೆ
ಆಪೋಶನವು ಆಯಿತೇಳು ಅಂಬುಧಿಯು ||
ಕಾಣಿಕಿತ್ತಾದರು ಕೈಮುಗಿವೆಂಬೆನೇ
ರಾಣಿವಾಸವು ಸಿರಿದೇವಿ ನಿನಗೆ
ಮಾಣದೆ ಮನದೊಳು ನಿನ್ನ ನಾಮ ಸ್ಮರಣೆ
ಎನ್ನಾಧೀನವ ಮಾಡೊ ಪುರಂದರವಿಠಲ ||
********