ಪಾಹಿ ಪರಮಾನಂದ ಪಾಹಿ ಮುನಿಜನವಂದ್ಯ
ಪಾಹಿ ಖಳಜನ ಬಾಧ ಪಾಹಿ ಗೋವಿಂದ ಪ.
ಪಾಹಿ ಗೋಪಿಯನಾಥ ಪಾಹಿ ಮನ್ಮಥ ತಾತ
ಪಾಹಿ ಲಕ್ಷ್ಮೀಕಾಂತ ಪಾಹಿ ಭೂಕಾಂತ ಅ.ಪ.
ಮತ್ಸ್ಯರೂಪಿಲಿ ಬಂದು ಬಲಿದ ದೈತ್ಯನ ಕೊಂದೆ
ಬೆಚ್ಚರದೆ ಬಹುಗಿರಿಯ ಬೆನ್ನಲ್ಲಿ ತಾಳ್ದೆ
ಬಚ್ಚಿಟ್ಟ ಧರಣಿಯನ್ನು ಬಲುಮೆಯಿಂದಲಿ ತಂದೆ
ಅರ್ಚಿಸಿದ ಪ್ರಹ್ಲಾದಗೆ ಒಲಿದೆ ನರಸಿಂಹ 1
ಕುಬ್ಜರೂಪಿಲಿ ನೆಲನ ಬೇಡಿ ಬಲಿಯನು ತುಳಿದೆ ಪಿತನಾಡಿದ
ಶಬ್ದವನ್ನು ಕೇಳಿ ಮಾತೆಯ ಶಿರವನಳಿದೆ
ಕೊಬ್ಬಿದ್ದ ರಾವಣನ್ನ ಕಂದರವ ಖಂಡಿಸಿದೆ
ಅಬ್ಜಮುಖಿ ಜಾನಕಿಯನಾಳಿದೆ ಶ್ರೀರಾಮ 2
ತುರುಹಿಂಡ ಕಾಯ್ದು ತಪವಳಿದು ಪತಿವ್ರತೆಯರ
ಭರದಿ ವಾಜಿಯನೇರಿ ಚರಿಸುತ್ತ ಬಂದೆ
ಕರುಣಾಳು ಶ್ರೀ ಹೆಳವನಕಟ್ಟೆ ರಂಗಯ್ಯ ಪಿಳ್ಳಂ-
ಗಿರಿ ವಾಸ ಶ್ರೀ ವೆಂಕಟೇಶ 3
***
ಪಾಹಿ ಪರಮಾನಂದ ಪಾಹಿ ಮುನಿಜನ ವಂದ್ಯ
ಪಾಹಿ ಖಳಜನ ಬಂಧ ಪಾಹಿ ಗೋವಿಂದಾ || PA ||
ಪಾಹಿ ಗೋಪಿಯನಾಥ ಪಾಹಿ ಮನ್ಮಥತಾತ
ಪಾಹಿ ಲಕ್ಷ್ಮೀಕಾಂತ ಪಾಹಿ ಶ್ರೀಕಾಂತಾ |\ A PA ||
ಮತ್ಸ್ಯರೂಪಿಲಿ ಬಂದು ಹೆಚ್ಚಿನ ದೈತ್ಯನ ಕೊಂದೆ |
ಬೆಚ್ಚರದೆ ಬಹುಗಿರಿಯ ಬೆನ್ನಲ್ಲಿ ತಾಳ್ದೆ |
ಬಚ್ಚಿಟ್ಟ ಧರಣಿಯನು ಬಲುಮೆಯಿಂದಲಿ ತಂದೆ |
ಅರ್ಚಿಸಿದ ಪ್ರಹ್ಲಾದಗೆ ಒಲಿದೆ ನರಸಿಂಹ || 1 ||
ಕುಬ್ಜರೂಪಿಲಿ ನೆಲನ ಬೇಡಿ ಬಲಿಯನು ತುಳಿದೆ ಪಿತನಾಡಿದ |
ಶಬ್ದವನ್ನು ಕೇಳಿ ಮಾತೆಯ ಶಿರವನಳಿದೆ |
ಕೊಬ್ಬಿದ್ದ ರಾವಣನ ಕಂಧರವ ಖಂಡಿಸಿದೆ |
ಅಬ್ಜಮುಖಿ ಜಾನಕಿಯನಾಳಿದೆ ಶ್ರೀರಾಮ || 2 ||
ತುರುಹಿಂಡ ಕಾಯ್ದು ತಪವಳಿದು ಪತಿವ್ರತೆಯರನು |
ಭರದಿ ವಾಜಿಯನೇರಿ ಚರಿಸುತ್ತ ಬಂದೆ |
ಕರುಣಾಳು ಹೆಳವನಕಟ್ಟೆ ರಂಗಯ್ಯ ಪಿಳ್ಳಂ-
ಗಿರಿ ವಾಸ ಶ್ರೀ ವೆಂಕಟೇಶ || 3 ||
***
Pāhi paramānanda pāhi munijana vandya pāhi khaḷajana bandha pāhi gōvindā || PA ||
pāhi gōpiyanātha pāhi manmathatāta pāhi lakṣmīkānta pāhi śrīkāntā |\ A PA ||
matsyarūpili bandu heccina daityana konde | beccarade bahugiriya bennalli tāḷde | bacciṭṭa dharaṇiyanu balumeyindali tande | arcisida prahlādage olide narasinha || 1 ||
kubjarūpili nelana bēḍi baliyanu tuḷide pitanāḍida | śabdavannu kēḷi māteya śiravanaḷide | kobbidda rāvaṇana kandharava khaṇḍiside | abjamukhi jānakiyanāḷide śrīrāma || 2 ||
turuhiṇḍa kāydu tapavaḷidu pativrateyaranu | bharadi vājiyanēri carisutta bande | karuṇāḷu heḷavanakaṭṭe raṅgayya piḷḷaṁ- giri vāsa śrī veṅkaṭēśa || 3 ||
Plain English
Pahi paramananda pahi munijana vandya pahi khalajana bandha pahi govinda || PA ||
pahi gopiyanatha pahi manmathatata pahi laksmikanta pahi srikanta |\ A PA ||
matsyarupili bandu heccina daityana konde | beccarade bahugiriya bennalli talde | baccitta dharaniyanu balumeyindali tande | arcisida prahladage olide narasinha || 1 ||
kubjarupili nelana bedi baliyanu tulide pitanadida | sabdavannu keli mateya siravanalide | kobbidda ravanana kandharava khandiside | abjamukhi janakiyanalide srirama || 2 ||
turuhinda kaydu tapavalidu pativrateyaranu | bharadi vajiyaneri carisutta bande | karunalu helavanakatte rangayya pillam- giri vasa sri venkatesa || 3 ||
***